photo credit : www.hrgrapevine.com

ಬೆಂಗಳೂರು: ಸೋಮಾರಿಗಳಂತೆ ಹೆಚ್ಚು ನಿದ್ರೆ ಮಾಡದೆ ಕೆಲಸಕ್ಕೆ ಗಮನ ಕೊಡಿ ಎಂದು ಆಗಾಗ ನಾವು ಕೇಳುತ್ತಿರುತ್ತೇವೆ. ಆದರೆ ಇಲ್ಲೊಂದು ಬೆಂಗಳೂರು ಮೂಲದ ಕಂಪನಿಯೊಂದು ನಿದ್ದೆ ಮಾಡಿದರೆ ಒಂದು ಲಕ್ಷ ಸಂಭಾವನೆ ಕೊಡುತ್ತಿದೆ ಎಂದರೆ ನೀವು ನಂಬುವಿರಾ? ಹೌದು ಈ ಕಂಪೆನಿ ಕೇವಲ ನಿದ್ರೆ ಮಾಡುವ ಕೆಲಸಕ್ಕೆ ಒಂದು ಲಕ್ಷ ಸಂಬಳ ಕೊಡುತ್ತಿದೆ. ಮೇಕ್ ಫಿಟ್ ಸಲ್ಯೂಷನ್ ಎಂಬ ಕಂಪನಿಯು ಈ ಆಫರ್ ಕೊಟ್ಟಿದ್ದು ನಿದ್ರೆ ಮಾಡುವ ಕೆಲಸಕ್ಕೆ ಇಂಟರ್ನ್ಶಿಪ್ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಾಜೆಕ್ಟ್ ಪ್ರಕಾರ ನೂರು ದಿನಗಳ ಕಾಲ ನೀವು ಒಂಬತ್ತು ತಾಸು ನಿದ್ದೆ ಮಾಡಬೇಕು. ನಿಮ್ಮ ಈ ಕೆಲಸಕ್ಕಾಗಿಯೇ ಒಂದು ಲಕ್ಷ ಸಂಬಳ. ಕಂಪನಿಯು ನಿಮಗೆ ವಿಶೇಷ ಡ್ರೆಸ್ಕೋಡ್ ನೀಡುತ್ತದೆ. ಆ ಡ್ರೆಸ್ ಕೋಡ್ ಧರಿಸಿಯೇ ನಿದ್ರಿಸಬೇಕು. ಇಂಟರ್ನೆಟ್ ಪೈಜಾಮ ಹಾಕಿಕೊಂಡು ಮಲಗಬೇಕು.

ಮನುಷ್ಯನ ನಿದ್ರೆಯ ಹವ್ಯಾಸ, ನಿದ್ರೆಯಿಂದ ಮನುಷ್ಯನ ಆರೋಗ್ಯದ ಮೇಲೆ ಆಗುವಂತಹ ಪರಿಣಾಮ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡುವುದೇ ಈ ಕಂಪನಿಯ ಉದ್ದೇಶ ಎಂದು ಮೇಕ್ ಫಿಟ್ ಸೆಲ್ಯೂಷನ್ ಕಂಪನಿಯ ನಿರ್ದೇಶಕ ಹಾಗೂ ಸಹಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಹೇಳಿದ್ದಾರೆ.

ಈ ಕೆಲಸಕ್ಕೆ ಆಯ್ಕೆಯಾಗುವ ವ್ಯಕ್ತಿಯ ಮಲಗುವ ಶೈಲಿಯನ್ನು ಕಂಪನಿ ಗಮನಿಸುತ್ತದೆ. ಮಾತ್ರವಲ್ಲ ಅವರೊಂದಿಗೆ ಕೌನ್ಸಲ್ಲಿಂಗ್ ಸೆಷನ್ ಕೂಡ ಮಾಡಲಾಗುತ್ತದೆ. ನಿದ್ರೆಯ ಅನುಭವಗಳನ್ನು ತಿಳಿಸುವುದಕ್ಕಾಗಿ ಅವರು ಹಾಸಿಗೆಗಳನ್ನು ಬಳಸುವ ರೀತಿಯನ್ನು ಕೂಡ ಪರೀಕ್ಷೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಕುಂಭಕರ್ಣನಂತೆ ನಿದ್ರೆ ಮಾಡುವವರಿಗೆ ಇದೊಂದು ಬಂಪರ್ ಆಫರ್ ಆಗಿದ್ದು, ನಿದ್ರೆ ಪ್ರಿಯರು ಇದಕ್ಕೆ ರೆಡಿ ಆಗಬಹುದು.

LEAVE A REPLY

Please enter your comment!
Please enter your name here