ಮಾಲೆ:ಮಾಲಿದ್ವೀಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಪಾರ್ಟಿಯ ಸಖ್ಯ ಮಾದ್ವೀಪಿಯನ್ ಡೆಮಾಕ್ರಟಿಕ್‍ ಪಾರ್ಟಿ(ಎಂಡಿಪಿ) ಅಭ್ಯರ್ಥಿ ಇಬ್ರಾಹೀಂ ಮುಹಮ್ಮದ್ ಸಾಲಿಹ್ ವಿಜಯಿಯಾಗಿರುವುದಾಗಿ ಪ್ರಾಥಮಿಕ ಫಲಿತಾಂಶ ಹೊರಬಂದಿದೆ. ಎರಡನೆ ಬಾರಿ ಆಯ್ಕೆ ಕನಸ್ಸು ಕಾಣುತ್ತಿದ್ದ ಅಧ್ಯಕ್ಷ ಮತ್ತು ಪ್ರೊಗ್ರೆಸಿವ್ ಪಾರ್ಟಿಆಫ್ ಮಾಲದ್ವೀಪದ(ಇಪಿಂ) ಅಭ್ಯರ್ಥಿ ಅಬ್ದುಲ್ಲ ಯಮೀನ್‍ರನ್ನು ಭಾರೀ ಸೋಲಿಗೆ ತಳ್ಳುವಲ್ಲಿ ಸಾಲಿಹ್ ಯಶಸ್ವಿಯಾದರು.

ಸಾಲಿಹ್‍ರನ್ನು ಭಾರತ ಅಭಿನಂದಸಿದ್ದು ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿಹಿಡಿದಿದೆ ಎಂದು ಪ್ರತಿಕ್ರಿಯಿಸಿತು.ಮಾಲಿ ದ್ವೀಪದ ಚುನಾವಣಾ ಆಯೋಗ ಅತಿಶೀಘ್ರದಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಬಹುದೆಂದು ಭಾರತ ನಿರೀಕ್ಷೆ ವ್ಯಕ್ತಪಡಿಸಿದೆ.

ಮೂವತ್ತು ವರ್ಷದ ಸರ್ವಾಧಿಕಾರಿ ಆಡಳಿತಕ್ಕೆ ಕೊನೆ ಹಾಡಿ 2008 ರಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಮುಹಮ್ಮದ್ ನಶೀದ್‍ರನ್ನು ಅಧಿಕಾರ ಭ್ರಷ್ಟಗೊಳಿಸಿ 2012ರಲ್ಲಿ 59 ವರ್ಷದ ಯಮೀನ್ ಅಧಿಕಾರಕ್ಕೇರಿದ್ದರು. 2015ರಲ್ಲಿ ಭಯೋತ್ಪಾನೆ ಅಪರಾಧ ಹೊರಿಸಿ ನಶೀದ್‍ರನ್ನು ಜೈಲಿಗೆ ದೂಡಿದದರು. ಈಗ ನಶೀದ್ ಶ್ರೀಲಂಕದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.

ಭಾರತ ಮತ್ತು ಚೀನದ ರಾಜ ತಾಂತ್ರಿಕ ಪ್ರಾಮುಖ್ಯತೆಯಿರುವ ಚುನಾವಣೆಯಲ್ಲಿ ಯಮೀನ್ ಚೀನದೆಡೆಗೆ ವಾಲಿದ್ದರು. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದಿದ್ದರೆ ದಿಗ್ಬಂಧ ಇತ್ಯಾದಿ ಕ್ರಮಕ್ಕೆ ಸಿದ್ಧವಾಗಬೇಕೆಂದು ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ಈ ಬಾರಿ ಎಚ್ಚರಿಕೆ ನೀಡಿವೆ.

ಚುನಾಣೆಯ ಹಿಂದಿನ ದಿವಸ ರಾತ್ರೆ ಪ್ರತಿಪಕ್ಷಗಳ ಕಚೇರಿಗೆ ಪೊಲೀಸ್ ದಾಳಿ ನಡೆದಿತ್ತು. ಸಾವಿರಾರು ಪುಟ್ಟ ದ್ವೀಪಗಳ ಸಂಗಮ ಮಾಲಿ ದ್ವೀಪವಾಗಿದೆ.ಪ್ರವಾಸೋದ್ಯಮಕ್ಕೆ ಪ್ರಸಿದ್ಧ ಸ್ಥಳವಾಗಿದೆ.ನಾಲ್ಕು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿಲ್ಲಿದೆ. ಹವಾಮಾನ ಬದಲಾವಣೆಯಿಂದಾಗಿ ದ್ವೀಪಗಳೇ ಇಲ್ಲದಾಗಬಹುದು ಎನ್ನುವ ಬೆದರಿಕೆ ಇರುವಂತೆಯೇ ಚುನಾವಣೆ ಅಲ್ಲಿ ನಡೆದಿದೆ.

Leave a Reply