ಬೇಕಾಗುವ ಸಾಮಗ್ರಿಗಳು:

ಅಕ್ಕಿ ಹುಡಿ- 4 ಕಪ್, ಹಾಲು- 1 ಕಪ್, ಫುಡ್ ಕಲರ್- 1/2 ಟೀ. ಚಮಚ (ಕೆಂಪು, ಹಸಿರು ಅಥವಾ ಹಳದಿ)
ಕಡಲೆ ಬೇಳೆ- 1/2 ಕಪ್, ತೆಂಗಿನ ತುರಿ- 1/2ತೆಂಗಿನ ಕಾಯಿ
1ಕ್ಕಿ ಏಲಕ್ಕಿ ಹುಡಿ- 1ಟೀ ಚಮಚ, ಜಾಯಿಕಾಯಿ ಹುಡಿ- 1ಟೀ ಚಮಚ, ಸಕ್ಕರೆ- 1 ಅಥವಾ 1 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಕಡಲೆ ಬೇಳೆಯನ್ನು ಮೃದುವಾಗುವರೆಗೆ ಬೇಯಿಸಿ ನೀರು ಬಸಿಯಿರಿ. ಹಾಲಿಗೆ ಬಣ್ಣವನ್ನು ಕಲಸಿ ಅಕ್ಕಿ ಹಿಟ್ಟಿಗೆ ಸುರಿದು ಮಿಕ್ಸ್ ಮಾಡಿ.
ಇದನ್ನು ಕಾಟನ್ ಬಟ್ಟೆಯಲ್ಲಿ ಹಾಕಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ (ಹಬೆಯಲ್ಲಿ) ಬೇಯಿಸಿ (15 ನಿಮಿಷ) ಇದನ್ನು ತೆಗೆದು ತಣ್ಣಗಾದ ಬಳಿಕ ಪುನಃ ಮಿಕ್ಸ್ ಮಾಡಿ. ಇನ್ನು ಸಕ್ಕರೆ, ಏಲಕ್ಕಿ ಹುಡಿ, ಕಡಲೆ ಬೇಳೆ, ತೆಂಗಿನ ತುರಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ ತಿನ್ನಬಹುದು.

Leave a Reply