ಲಂಡನ್ : ವಿಶ್ವಕಪ್ ಕ್ರಿಕೆಟ್ ವೀಕ್ಷಿಸಲು ಬಂದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ದಿ ಓವಲ್ ಕ್ರಿಕೆಟ್ ಕ್ರೀಡಾಂಗಣದ ಬಳಿ ಕ್ರಿಕೆಟ್ ಅಭಿಮಾನಿಗಳು ‘ಚೋರ್ ಹೈ ‘(ಕಳ್ಳ) ಘೋಷಣೆ ಕೂಗಿದ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ನೋಡಲು ಬಂದ ವಿಜಯ್ ಮಲ್ಯ ಹಿಂದಿರುಗುವಾಗ ಗೇಟ್ ಬಳಿ ಸುತ್ತುವರಿದು ಘೋಷಣೆ ಕೂಗಲಾಗಿದೆ. ಮಲ್ಯ ಜೊತೆ ಅವರ ಜೊತೆ ತಾಯಿ ಲಲಿತಾ ಮತ್ತು ಆಪ್ತರು ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಯ, ನನ್ನ ತಾಯಿಗೆ ನೋವಾಗದಂತೆ ಖಚಿತ ಪಡಿಸಿಕೊಳ್ಳುತ್ತೇನೆ ಎಂದರು. ಮುಂದಿನ ವಿಚಾರಣೆಗಾಗಿ ನಾನು ಸಿದ್ಧತೆ ನಡೆಸುತ್ತಿದ್ದೇನೆ ಮತ್ತು ನನ್ನ ಬೇಡಿಕೆಯನ್ನು ನಾನು ಮುಂದಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಣ್ಣ ಜನರ ಗುಂಪು ಘೋಷಣೆ ಕೂಗುತ್ತಾ, ಮನುಷ್ಯನಾಗಿ ತನ್ನ ದೇಶದೊಂದಿಗೆ ಕ್ಷಮೆಯಾಚಿಸು ಎಂದು ಆಗ್ರಹಿಸಿ ಜೋರಾಗಿ ಘೋಷಣೆ ಕೂಗುತ್ತಿದ್ದರು. ವಿಡಿಯೋ ನೋಡಿ
Sloganeering by #TeamIndia fans outside the Oval Cricket ground in London against fugitive liquor baron @TheVijayMallya, who is facing extradition proceedings in UK. The incident happened post the #INDvsAUS #CWC19 match. pic.twitter.com/xjt56d0MnL
— News18 (@CNNnews18) June 9, 2019