ಕೊಲ್ಕತಾ: ಪಶ್ಚಿಮಬಂಗಾಳದ ಪ್ರಮುಖ ಹಬ್ಬ ದುರ್ಗಾ ಪೂಜೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 28 ಕೋಟಿ ರೂಪಾಯಿ ಗ್ರಾಂಟ್ ನೀಡಿದ್ದಾರೆ. ಕಮ್ಯುನಿಟಿ ಡೆವಲಪ್‍ಮೆಂಟ್ ಪ್ರೋಗ್ರಾಂ ಅಡಿಯಲ್ಲಿಪ್ರತಿಯೊಂದು ಪೂಜೆಗೆ ಸಮಿತಿಗಳಿಗೂ ತಲಾ10,000ರೂಪಾಯಿ ವಿತರಿಸಲು ಪಶ್ಚಿಮಬಂಗಾಳ ಸರಕಾಋ ನಿರ್ಧರಿಸಿದೆ.

ಕೊಲ್ಕತಾದಲ್ಲಿ3000 ದುರ್ಗಾ ಪೂಜಾ ಸಮಿತಿಗಳಿದ್ದು ರಾಜ್ಯದಲ್ಲಿ 28,000 ಪೂಜಾ ಸಮಿತಿಗಳಿವೆ. ಇವುಗಳಿಗೆಸರಕಾರದ ಗ್ರಾಂಟ್ ಹಣ ಸಂದಾಯವಾಗಲಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಪೂಜಾ ಸಂಘಟಕರ ಕೋ ಆರ್ಢಿನೇಶನ್ ಕಮಿಟಿ ಸಭೆಯಲ್ಲಿ ಮಾತಾಡುತ್ತಿದ್ದ ವೇಳೆ ಸರಕಾರದ ಅನುದಾನವನ್ನು ಘೋಷಿಸಿದ್ದಾರೆ.

ಮಾತ್ರವಲ್ಲ ಪೂಜೆಗೆ ಅಗ್ನಿಶಾಮಕ ವಿಭಾಗದಿಂದ ಅನುಮತಿ ಪಡೆಯುವ ವೇಳೆ ಶುಲ್ಕ ಭರಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ದುರ್ಗಾ ಪೂಜೆ ಅಕ್ಟೋಬರ್‍ನಲ್ಲಿ ನಡೆಯಲಿದೆ.

Leave a Reply