ಬರ್ವಾನಿ: ಮಧ್ಯ ಪ್ರದೇಶದಲ್ಲಿ ಏಳರ ಹರೆಯದ ಮೊಮ್ಮಗನ ಮುಂದೆಯೇ 45ರ ಹರೆಯದ ತಾಯಿಯನ್ನು 30ರ ಯುವಕ ಅತ್ಯಾಚಾರಗೈದ ಘಟನೆ ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ. ಈ ಅಘಾತಕಾರಿ ಘಟನೆಯು ಸೆ.2 ರಂದು ನಡೆದಿದೆ.

ಅಂಗ ವಿಕಲ ಪತಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಮಲಗಿದ್ದ ತಾಯಿಯ ಮೇಲೆ ಈ ಕಿರಾತಕ ದಾಳಿ ನಡೆಸಿದ್ದ. ಇದನ್ನು ತಡೆದಾಗ ಆಕೆಯ ಕತ್ತನ್ನು ಬಲವಾಗಿ ಒತ್ತಿ ಹಿಡಿದು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪತ್ನಿಯನ್ನು ತೊರೆದ ಬಳಿಕ ಮೂರು ಮಕ್ಕಳೊಂದಿಗೆ ತನ್ನ ತಂದೆ ತಾಯಂದಿರೊಂದಿಗೆ ಆತ ಜೀವಿಸುತ್ತಿದ್ದ.

ಅಜ್ಜಿಯ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ಮೊಮ್ಮಗ ನೋಡಿದರೂ ಭಯದಿಂದ ಮಾತಾಡಿರಲಿಲ್ಲ. ಬಳಿಕ ಮಕ್ಕಳೊಂದಿಗೆ ಹತ್ತಿರದ ತೋಟಕ್ಕೆ ಓಡಿ ತಪ್ಪಿಸಿ ಕೊಂಡನು. ವಿಷಯ ತಿಳಿದು ಊರವರು ಈ ವಿಚಾರ ತಿಳಿದು ಪೋಲೀಸರಿಗೆ ದೂರು ಸಲ್ಲಿಸಿದರು.

Leave a Reply