ವಿಜಯಪುರ: ತಾವು ಮಾಡಿದ ಸಮಸ್ಯೆ ಬಗೆ ಹರಿದು ಎಲ್ಲ ಜಂಜಡಗಳಿಂದ ಮುಕ್ತಿ ಹೊಂದಬೇಕು ಎಂಬ ವಿಶ್ವಾಸದಿಂದ ಭಕ್ತರು ದೇವರ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ತನ್ನಿಷ್ಟದ ದೇವರ ಮೊರೆ ಹೋದರೂ ಸಮಸ್ಯೆ ಬಗೆ ಹರಿಸದ ದೇವರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದಾನೆ.
ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ(32) ಎಂಬ ವ್ಯಕ್ತಿ ನಂದಿ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದು, ಈತ 3 ಲಕ್ಷ ರೂಪಾಯಿ ಸಾಲ ಮಾಡಿದ್ದ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದ
ದೇವರಿಗೆ ಅವಮಾನ ಮಾಡಿದ್ದಾನೆ ಎಂಬ ಕಾರಣಕ್ಕೆ ಕೂಡಗಿ ಠಾಣೆ ಪೊಲೀಸರು, ಆರೋಪಿ ಬಸಪ್ಪನನ್ನು ಬಂಧಿಸಿದ್ದಾರೆ.

representational image

 

 

Leave a Reply