ವಾಷಿಂಗ್ಟನ್: ಅಮೆರಿಕ ಬೇಹುಗಾರಿಕಾ ಏಜೆನ್ಸಿ ಅಧ್ಯಕ್ಷ ಟ್ರಂಪ್‍ಗೆ ಅಪರಿಚಿತ ಪತ್ರವೊಂದು ಬಂದಿದ್ದು ಇದಕ್ಕೆ ವಿಷಯುಕ್ತ ರಾಸಾಯನಿಕವನ್ನು ಮಿಶ್ರಣಗೊಳಿಸಲಾಗಿರುವ ಸಂದೇಹವಿದೆ ಎಂದು ತಿಳಿಸಿದೆ. ಈ ಪತ್ರವನ್ನು ವೈಟ್ ಹೌಸ್‍ನಲ್ಲಿ ಸ್ವೀಕರಿಸಲಾಗಿಲ್ಲ. ಮತ್ತು ವೈಟ್‍ಹೌಸ್‍ಗೆ ತರಲಾಗಿರಲಿಲ್ಲ. ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಪೆಂಟಗಾನ್ ವಕ್ತಾರ ಕ್ರಿಸ್ ಶೋರ್‍ವುಡ್ ಘಟನೆಯನ್ನು ಪುಷ್ಟೀಕರಿಸಿದ್ದು ಇದೊಂದು ಭಯೋತ್ಪಾದಕರ ಕೃತ್ಯ ಇರಬಹುದು ಎಂದು ಶಂಕಿಸಿದ್ದಾರೆ. ಪತ್ರದಲ್ಲಿ ಪ್ರಾಣಾಂತಿಕ ರಾಸಾಯನಿಕವನ್ನು ಅದ್ದಿ ತೆಗೆಯಲಾಗಿದೆ ಎಂದು ಭಾವಿಸಲಾಗಿದೆ. ಪೆಂಟಗಾನ್ ಪೊಲೀಸರು ತನಿಖೆಯ ಹೊಣೆಯನ್ನುಎಫ್‍ಬಿಐಗೆ ವಹಿಸಿದ್ದಾರೆ. ಈ ಪತ್ರವನ್ನುರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಮತ್ತು ನೌಕಾಸೇನೆಯ ಪ್ರಮುಖ ಎಡ್ಮಿರಲ್ ಜಾನ್ ರಿಚರ್ಡ್‍ಸ್‍ರಿಗೆ ಬರೆಯಲಾಗಿದೆ ಎಂದು ಓರ್ವ ರಕ್ಷಾಣಾಧಿಕಾರಿ ತಿಳಿಸಿದ್ದಾರೆ.

ವೈಟ್ ಹೌಸ್ ಮತ್ತು ಪೆಂಟಗಾನ್‍ಗೆ ಕಳುಹಿಸುವ ಪತ್ರದಲ್ಲಿ ಪರಸ್ಪರ ಸಂಬಂಧ ಇರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.ಇದರಲ್ಲಿ ರಾಸಾಯನಿಕ ಪದಾರ್ಥವನ್ನು ಲೇಪಿಸಲಾಗಿದೆ. ಇದು ಇನ್ನಷ್ಟೇ ಲ್ಯಾಬ್ ಪರೀಕ್ಷೆಯಿಂದ ದೃಢ ಗೊಳ್ಳಬೇಕಾಗಿದೆ.

ಈ ಪದಾರ್ಥವನ್ನು ನುಂಗಿದರೆ ಅಥವಾ ಚುಚ್ಚು ಮದ್ದಿನಲ್ಲಿ ನೀಡಿದರೆ ಸೆಕೆಂಡಿನಲ್ಲಿ ಪ್ರಾಣಕ್ಕೆ ಅಪಾಯಕಾರಿಯಾಗುತ್ತದೆ.ಸೈನೈಡ್ ಹೋಲಿಸಿದರೆ ಇದರ ಪ್ರಭಾವ 6000 ಪಟ್ಟು ಅಧಿಕವಾಗಿದೆ. ಬಹಳ ದೂರದಿಂದ ಇದರ ಪ್ರಭಾವಕ್ಕೊಳಗಾದರೆ ವಾಕರಿಕೆ ಬರುವುದು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಮತ್ತು ಅಂಗಾಂಗಳನ್ನು ನಿಷ್ಕ್ರಿಯ ಗೊಳಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

Leave a Reply