ಉತ್ತಮ ಗಂಡನಾಗುವುದು ಅಸಾಧ್ಯವೆನಲ್ಲ. ಹೆಂಡತಿ ಬಯಸುವುದು ಗಂಡನ ಪ್ರೀತಿ ಮತ್ತು ಕಾಳಜಿ

ಇದುನಮ್ಮಊರು: ಮಧ್ಯಪ್ರದೇಶದ ಜಬಲ್ಪುರ ನಿವಾಸಿ ಎಂಜಿನಿಯರ್ ಜ್ಞಾನ ಪ್ರಕಾಶ್ ಅವರು ಸ್ಟೋರಿ ಚರ್ಚೆಯಲ್ಲಿದೆ. ಯಾಕೆಂದರೆ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು, ಅವರು ಮನೆಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಆಮ್ಲಜನಕ ಸಿಲಿಂಡರ್, ವೆಂಟಿಲೇಟರ್ ಎಲ್ಲಾ ರೀತಿಯ ಸೌಲಭ್ಯವನ್ನು ಮನೆಯಲ್ಲೇ ಮಾಡಿದ್ದಾರೆ. ವಿಶೇಷವೆಂದರೆ ಅವರು ಯಾವುದೇ ವೈದ್ಯಕೀಯ ಕೋರ್ಸ್ ಮಾಡಿಲ್ಲ. ಆದರೂ ಅವರು ಇದೆಲ್ಲವನ್ನೂ ತುಂಬಾ ಸುಸೂತ್ರವಾಗಿ ನಿಭಾಯಿಸುತ್ತಿದ್ದಾರೆ.

ಜ್ಞಾನ ಪ್ರಕಾಶ್ ದೈನಿಕ್ ಭಾಸ್ಕರ್ ಜೊತೆ ಮಾತನಾಡುತ್ತಾ, ಅವರ ಪತ್ನಿ ಕುಮುದಾನಿ ಶ್ರೀವಾಸ್ತವ ಅವರಿಗೆ 72 ವರ್ಷ. ಅವರಿಗೆ ಆಸ್ತಮಾ ಇದ್ದು ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲು ಮಾಡುವ ಪರಿಸ್ಥಿತಿ ಇದೆ. ಕಳೆದ 4 ವರ್ಷಗಳಲ್ಲಿ ಹಲವು ಬಾರಿ ಅವರನ್ನು ಅಡ್ಮಿಟ್ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ನಾನು ಮನೆಯನ್ನೇ ಆಸ್ಪತ್ರೆಯನ್ನಾಗಿ ಮಾಡಿದ್ದೆ ಎಂದು ಹೇಳಿದರು.

twitter
twitter

ಮನೆಯಲ್ಲಿ ಓಸ್ಜಿನ್ ಪೈಪ್‌ಲೈನ್ ಅಳವಡಿಸಲಾಗಿದೆ, ಹೀರುವ ಯಂತ್ರ, ನೆಬ್ಯುಲೈಜರ್, ಏರ್ ಪ್ಯೂರಿಫೈಯರ್ ಮತ್ತು ವೆಂಟಿಲೇಟರ್ ಅನ್ನು ಇರಿಸಿದೆ. ಆಮ್ಲಜನಕದ ಸಂಪೂರ್ಣ ಪೈಪ್‌ಲೈನ್ ಅಳವಡಿಸಿ ಮನೆಯ ರೂಮನ್ನು ಸಂಪೂರ್ಣ ಐಸಿಯು ಆಗಿ ಪರಿವರ್ತಿಸಿದ್ದಾರೆ.ಮಾತ್ರವಲ್ಲ ಅವರು ತಮ್ಮ ಕಾರಿನಲ್ಲಿ ಆಕ್ಸಿಜನ್ ಫಿಟ್ಟಿಂಗ್ ಕೂಡ ಮಾಡಿದ್ದಾರೆ. ಅವರು ತಮ್ಮ ಕಾರನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದಾಗಲೆಲ್ಲಾ ಅವರು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸುತ್ತಾರೆ.

2016 ರಲ್ಲಿ ಮೊದಲ ಬಾರಿಗೆ ಪತ್ನಿ ಅನಾರೋಗ್ಯಕ್ಕೆ ಒಳಗಾದಾಗ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಅವರು ಹೇಳುತ್ತಾರೆ.ಇದರಿಂದ ಹೊರಬರಲು ಅವರು ಯೋಗದ ಮೊರೆ ಹೋದರು. ಪತ್ನಿಯ ಶ್ವಾಸಕೋಶ ಸಂಪೂರ್ಣ ಡ್ಯಾಮೇಜ್ ಆಗಿದೆ. ಆದ್ದರಿಂದ ಅವರಿಗೆ ಆಕ್ಸಿಜನ್ ನ ಅಗತ್ಯ ತುಂಬಾ ಇದೆ. ಮಕ್ಕಳಿಗೆ ಉದ್ಯೋಗ ಬಿಟ್ಟು ಬರಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯನ್ನು ಆಸ್ಪತ್ರೆಯನ್ನಾಗಿ ಮಾಡಬೇಕಾಯಿತು. ಮಾತ್ರವಲ್ಲ ಒಂದು ಬಡ ಕುಟುಂಬಕ್ಕೆ ಬಾಡಿಗೆ ಇಲ್ಲದೆ ಮನೆ ಕೊಟ್ಟಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡುತ್ತಾರೆ, ಕುಶಲೋಪರಿ ಮಾಡುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಮನೆಯ ವಾತಾವರಣದ ಅನುಭವ ಆಗುತ್ತದೆ ಎಂದು ಅವರು ಹೇಳುತ್ತಾರೆ.

Leave a Reply