ವಾಶಿಂಗ್ಟನ್: ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಸಭೆಯಲ್ಲಿ ಯಾವುದೇ ವ್ಯಕ್ತಿಗೆ ತಮಾಷೆ ಮಾಡುತ್ತಾರೆ. ಮತ್ತೊಮ್ಮೆ ಅನಿವಾಸಿಗಳ ವಿರುದ್ಧ ಮಾನವತೆಗೆ ಅಪಾಯವಿರುವಂತಹ ಹೇಳಿಕೆ ಕೊಡುತ್ತಾರೆ. ಈ ಬಾರಿ ಅವರು ತನ್ನ ಪ್ರತಿಮೆಯ ಕಾರಣದಿಂದ ಸುದ್ದಿಯಾಗುತ್ತಿದ್ದು ಅದರಲ್ಲಿ ಪೀ ಆನ್ ಮೀ. ನನ್ನಮೇಲೆ ಮೂತ್ರ ಮಾಡಿರಿ ಎಂದು ಬರೆದಿಡಲಾಗಿದೆ.

ಫಿಲ್ ಗಾಬಿಲ್ ಟ್ರಂಪ್‍ರ ಪ್ರತಿಮೆ ತಯಾರಿಸಿ ನ್ಯೂಯಾರ್ಕ್ ಬೂಕ್ಲಿನ್‍ನಲ್ಲಿರಿಸಿದ್ದಾರೆ. ಈ ಪ್ರತಿಮೆಯ ಮೇಲೆ ಮೂತ್ರ ವಿಸರ್ಜಿಸುವಂತೆ ಅವರು ಆಹ್ವಾನ ನೀಡಿದ್ದಾರೆ. ತನ್ನ ಕೃತ್ಯಕ್ಕೆ ಅವರು ಸ್ಪಷ್ಟೀಕರಣ ನೀಡಿದ್ದು ಇದು ತನ್ನ ವೈಯಕ್ತಿಕವಾದ ಮತ್ತು ಜನರ ಭಾವನೆಗಳನ್ನು ಮೂರ್ತಿಯ ರೂಪದಲ್ಲಿ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ. ಅವರ ಪ್ರಕಾರದಲ್ಲಿ ಟ್ರಂಪ್ ಹೊಯ್ಯಿಸಿಕೊಳ್ಳಲಿಕ್ಕೆ ಲಾಯಕ್ಕಾದ ವ್ಯಕ್ತಿಯಾಗಿದ್ದಾರೆ.

ಈ ಪ್ರತಿಮೆಯಲ್ಲಿ ಟ್ರಂಪ್‍ರ ಹಳೆಯ ಲುಕ್‍ನಲ್ಲಿ ನಕಲು ಮಾಡಲಾಗಿದೆ.1980-1990ರಲ್ಲಿ ಅವರು ಇದ್ದ ರೀತಿಯಲ್ಲಿ ಪ್ರತಿಮೆಯನ್ನು ತಯಾರಿಸಲಾಗಿದೆ. ಫಿಲ್ ಇದು ತನ್ನ ಪರ್ಸನಲ್ ಎಕ್ಸ್‍ಪ್ರೆಶನ್ ಆಗಿದೆ. ಅದನ್ನು ಬಹಿರಂಗಗೊಳಿಸುವ ಸಂಪೂರ್ಣ ಹಕ್ಕುತನಗಿದೆ . ಜನರು ಕೂಡ ಇದರಲ್ಲಿ ಧನಾತ್ಮಕ ಪ್ರತಿಕ್ರಿಯೆ ನೀಡಬೇಕೆಂದು ಫಿಲ್ ಆಗ್ರಹಿಸಿದ್ದಾರೆ. ಒಂದು ಪ್ರತಿಮೆಗೆ ಮೂತ್ರ ಹೊಯ್ಯುವುದು ಹೇಗೆ ಧನಾತ್ಮಕವಾಗುತ್ತದೆ ಎಂದು ಪ್ರತಿಮೆ ತಯಾರಕ ಫಿಲ್ ಹೇಳಿಲ್ಲ ಎಂದು ವರದಿ ತಿಳಿಸಿದೆ.

Leave a Reply