ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರತಾಪಘಡದಲ್ಲಿ ವಾಸಿಸುತ್ತಿರುವ ಧರ್ಮೇಂದ್ರ ಪ್ರತಾಪ್ ಸಿಂಗ್ ರವರು 8 ಅಡಿ 2 ಇಂಚುಗಳಷ್ಟು ಉದ್ದ ಇದ್ದಾರೆ. ಈಗ ಅವರಿಗೆ ಅವರ ನೀಳಕಾಯ ಶರೀರವೇ ಸಮಸ್ಯೆಯಾಗಿದೆ. ನಿಜವಾಗಿ ಪುರುಷರ ಒಳ್ಳೆಯ ಎತ್ತರ ಇದ್ದರೆ ಅದನ್ನು ವರದಾನವೆಂಬಂತೆ ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ಉಲ್ಟಾ ಆಗಿದೆ.ಧರ್ಮೇಂದ್ರ ಪ್ರತಾಪ್ ಸಿಂಗ್ ರವರನ್ನು ನೋಡಿ ಹುಡುಗಿಯರು ಅವರನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ.

ಈಗ ಧರ್ಮೇಂದ್ರ ಅವರಿಗೆ 45 ವರ್ಷ. ಅನೇಕ ಸಂಬಂಧಿಕರು ಅವರ ಮದುವೆಗಾಗಿ ಹೆಣ್ಣು ಹುಡುಕಿದ್ದರು ಆದರೆ ಯಾರೂ ಇದುವರೆಗೆ ಯಶಸ್ವಿಯಾಗಲಿಲ್ಲ ..ಈಗ ಧರ್ಮೇಂದ್ರ ಅವರು ಮದುವೆಯಾಗಿ ಕುಟುಂಬದೊಂದಿಗೆ ಕಳೆಯುವ ಭರವಸೆಯನ್ನು ಬಿಟ್ಟು ಬಿಟ್ಟಿದ್ದಾರೆ.

dharmendra singh

ಆದಾಗ್ಯೂ, ಧರ್ಮೇಂದ್ರ ಅವರ ತಮ್ಮ ಎತ್ತರದಿಂದಾಗಿ ಆ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಜನರು ಅವರನ್ನು ನೋಡಲು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ದೂರದಿಂದ ಬರುತ್ತಾರೆ. ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಧರ್ಮೇಂದ್ರ ಸ್ಟಾರ್ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಧರ್ಮೇಂದ್ರ ಸ್ನಾತಕೋತ್ತರ ಪದವಿ ಪಡೆದಿದ್ದು, ಕೆಲಸದ ಹುಡುಕಾಟದಲ್ಲಿ ಮುಂಬೈಗೆ ಹಲವು ಬಾರಿ ಭೇಟಿ ನೀಡಿದ್ದರೂ ಅವರಿಗೆ ಕೆಲಸ ಸಿಗಲಿಲ್ಲ. . ಕಳೆದ ವರ್ಷ ಅವರು ಅಹಮದಾಬಾದ್‌ನಲ್ಲಿ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಅವರಿಗೆ ವಿಶೇಷ ಹಾಸಿಗೆಯ ವ್ಯವಸ್ಥೆ ಮಾಡಬೇಕಾಯಿತು.

Leave a Reply