ಮಂಡ್ಯ : ಅಪ್ಪ ಅಮ್ಮಂದಿರೊಂದಿಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ಕೋಪ ಉಕ್ಕೇರಿ ಬರುವುದು ಸಹಜ. ಆದಷ್ಟೇ ಮಂಡ್ಯದಲ್ಲಿ ಒಬ್ಬ ತಾಯಿ ಜೊತೆ ಕೆಟ್ಟದಾಗಿ ವರ್ತಿಸಿದವನ ರುಂಡವನ್ನೇ ಕಡಿದು ಪೊಲೀಸ್ ಠಾಣೆಗೆ ಕೊಂಡೊಯ್ದು ಶರಣಾದ ಘಟನೆ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕ ಬಾಗಿಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಿರೀಶ್ ಎಂಬಾತ ಪಶುಪತಿ ಎಂಬಾತನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದನೆಂದು ಆರೋಪಿಸಿ ಆತನ ತಲೆಯನ್ನು ಕಡಿದಿದ್ದಾನೆ.
ತಾಯಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದಕ್ಕಾಗಿ ಹೀಗೆ ಮಾಡಿದ್ದೇನೆ ಎಂದು ಪಶುಪತಿ ಹೇಳಿದ್ದು, ಹಿಂದೆ ಚಿಕ್ಕಮಗಳೂರು ಮತ್ತು ಕೋಲಾರದಲ್ಲೂ ರುಂಡವನ್ನು ಕತ್ತರಿಸಿ ಠಾಣೆಗೆ ಹಾಜರಾದ ಘಟನೆ ನಡೆದಿತ್ತು.