Representational image

ಗಂಡ-ಹೆಂಡತಿ ಜಗಳ ಉಂಡು ಮಲಗೂವರೆಗೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬೆಲ್ಲಾ ಗಾದೆ ಮಾತುಗಳಿವೆ. ಗಂಡ ಹೆಂಡತಿ ಪರಸ್ಪರ ಚರ್ಚಿಸಿ ಅರ್ಥೈಸಿ ಸಂಸಾರ ನಡೆಸಿದರೆ ಮಾತ್ರ ಕುಟುಂಬದ ನೌಕೆ ದಡ ಸೇರಬಹುದು. ಇಲ್ಲದಿದ್ದರೆ ಅನಾಹುತಕ್ಕೆ ಎಡೆಯಾಗುತ್ತದೆ. ಅಂತಹದ್ದೇ ಒಂದು ಘಟನೆ ವರದಿಯಾಗಿದ್ದು, ಮಗಳು ದೊಡ್ಡವಳಾಗುವ ತನಕ ಸೆಕ್ಸ್ ಗಾಗಿ ಕಾಯಿರಿ ಎಂದ ಪತ್ನಿಯನ್ನೇ ಪತಿರಾಯ ಕೊಂದ ಘಟನೆ ನಡೆದಿದೆ. ಪತಿ ಗೋವಾದ ನಿವಾಸಿಯಾಗಿದ್ದು, ಪತ್ನಿ ಸೆಕ್ಸ್ ಗೆ ನಿರಾಕರಿಸಿದ ಕಾರಣಕ್ಕಾಗಿ ಪತ್ನಿಯನ್ನು ಕೊಂದಿದ್ದೇನೆ ಎಂದು ಸ್ವತಃ ತಾನೇ ಪೋಲಿಸರಿಗೆ ವಿಷಯ ತಿಳಿಸಿದ್ದಾನೆ.

“ಒಂದೋ ಅನ್ಯ ಸ್ತ್ರೀಯರ ಸಂಪರ್ಕ ಹೊಂದಿ ಅಥವಾ ಮಗಳು ದೊಡ್ಡವಳಾಗುವ ತನಕ ಕಾಯಿರಿ “ಎಂದು ಪತ್ನಿ ಹೇಳಿದ್ದಳೆಂದು ಆ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಇದರಿಂದ ಕುಪಿತನಾದ ವ್ಯಕ್ತಿ ಪತ್ನಿಯ ಕುತ್ತಿಗೆ ಕೊಯ್ದಿದ್ದಾನೆ ಎಂದು ವರದಿಯಾಗಿದೆ. ಒರಿಸ್ಸಾ ಮೂಲದ ಈ ವ್ಯಕ್ತಿ 7 ವರ್ಷಗಳ ಹಿಂದೆ ಕೇರಳದ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ 5 ವರ್ಷದ ಮಗಳು ಹಾಗೂ 3 ವರ್ಷದ ಮಗ ಇದ್ದಾರೆ.

Leave a Reply