representational image credit : noukri nama

ವಿಯೆನ್ನ: ಹೇಗಿದೆ ಜೂಜಾಟದ ಮಹಿಮೆ. ಗ್ಯಾಂಬ್ಲಿಂಗ್ ಕಂಪೆನಿ ವಿರುದ್ಧ ವ್ಯಕ್ತಿಯೊಬ್ಬರು ನೀಡಿದ ದೂರಿನಲ್ಲಿ 2.5 ಮಿಲಿಯನ್ ಯುರೊ ಸುಮಾರು 21ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟಪರಿಹಾರ ನೀಡಲು ಆಸ್ಟ್ರೀಯನ್ ಕೋಟು ಆದೇಶ ನೀಡಿದೆ. ಸೋಮವಾರ ಪ್ರಕರಣದಲ್ಲಿ ಕೋರ್ಟು ತೀರ್ಪು ನೀಡಿದೆ.

2002ರಿಂದ ಹತ್ತು ವರ್ಷಗಳ ಕಾಲ ಸುಮಾರು 17ಕೋಟಿ ರೂಪಾಯಿ ಎರಡು ಮಿಲಿಯನ್ ಯುರೋ ಸ್ಲಾಟ್ ಮೆಶಿನ್‍ಗಳ ಮೂಲಕ ಕಳಕೊಂಡಿದ್ದ ದೂರು ದಾರ ಕೋರ್ಟಿಗೆ ಮನವರಿಕೆ ಮಾಡಿಕೊಡಲು ಯಶಸ್ವಿಯಾಗಿದ್ದಾನೆ. ಆಸ್ಟ್ರೀಯದ ನಗರ ವೀನರ್ ನೊಯಿಸ್ಟಾಡ್‍ನಲ್ಲಿ ರು ನೊವಾಮಾಟಿಕ್ ಕಂಪೆನಿಯ ವಿರುದ್ಧ ಕೇಸು ದಾಖಲಾಗಿತ್ತು.

ಈ ವಿಷಯದಲ್ಲಿ ತಜ್ಞರ ಸಲಹೆ ಪಡೆದ ಕೋರ್ಟು ಜೂಜಾಟದಲ್ಲಿ ಮುಳುಗಿದ್ದರಿಂದ ದುಡಿಯುವ ಸಾಮರ್ಥ್ಯ ಭಾಗಶಃ ಇಲ್ಲದಾಗಿರುವುದನ್ನು ಕೋರ್ಟು ಪತ್ತೆಹಚ್ಚಿತ್ತು. ನಂತರ 21ಕೋಟಿರೂ ನಷ್ಟಪರಿಹಾರ ನೀಡಲು ತೀರ್ಪು ಹೇಳಿದೆ.

ನೊವಾಮಾಟಿಕ್ ಕಂಪೆನಿಗೆ ಜಗತ್ತಿನಾದ್ಯಂತ ಗ್ಯಾಂಬ್ಲಿಂಗ್ ಕೇಂದ್ರಗಳಿವೆ. ತೀರ್ಪಿನ ವಿರುದ್ಧ ಅಫೀಲು ಹೋಗುವುದಾಗಿ ಕಂಪೆನಿ ತಿಳಿಸಿದೆ. 2015ರಲ್ಲಿ ವಿಯೆನ್ನಾದ ಮುನ್ಸಿಪಾಲಿಟಿ ಅಧಿಕಾರಿಗಳು ಕ್ಯಾಸಿನೊಗಳ ಹೊರಗೆ ಸ್ಲಾಟ್ ಮೆಶಿನ್ ನಿಷೇಧಿಸಿತ್ತು. ನಿಷೇಧ ಬರುವ ಮೊದಲು ವಿಯೆನ್ನದಲ್ಲಿ 2600 ಇಂಥ ಮೆಶಿನ್‍ಗಳು ಕ್ಯಾಸಿನೊಗಳ ಹೊರಗೆ ಇರಿಸಲಾಗಿತ್ತು.

Leave a Reply