ಸಾಂದರ್ಭಿಕ ಚಿತ್ರ

ಮುಂಬೈ: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಯುವತಿಯೊಬ್ಬಳನ್ನುಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಮಗುವಿನ ತಂದೆ ಯುವತಿಯು ಅತ್ಮಹತ್ಯೆಗೆ ಯತ್ನಿಸಿದಾಗ ಯುವತಿಯನ್ನು ಪಾರು ಮಾಡಿದ್ದರು. ಆದರೆ ಆಕೆ ನಂತರ ತನ್ನ ರಕ್ಷಿಸಿದಾತ ಪುಟ್ಟ ಮಗುವನ್ನೆ ಕದ್ದೊಯ್ದಿದ್ದಳು. ಮಹಾರಾಷ್ಟ್ರದ ಮುಂಬ್ರದಲ್ಲಿ ಸಮೀಪದಲ್ಲಿ ಘಟನೆ ನಡೆದಿದೆ. ಮುಗುವನ್ನು ಕದ್ದೊಯ್ಯದ (25) ವರ್ಷದ ಅಂಜಲಿ ಎನ್ನುವ ಯುವತಿಯನ್ನುಪೊಲೀಸರು ಬಂಧಿಸಿದ್ದಾರೆ.

ಮುಂಬೈಯ ಕಲ್ಯಾಣ್‍ನಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೆಪ್ಟಂಬರ್ 29ರಂದು ಬೆಳಗ್ಗೆ ಅಂಜಲಿ ರೈಲಿನ ಮುಂದಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಅಪಹರಣಕ್ಕೊಳಗಾದ ಮಗುವಿನ ತಂದೆ ನೋಡಿ ಆಕೆಯನ್ನು ರಕ್ಷಿಸಿ ಬುದ್ಧಿವಾದ ಹೇಳಿದ್ದರು. ಈ ಸಂದರ್ಭದಲ್ಲಿ ತನಗೆ ಯಾರೂ ಇಲ್ಲ. ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಸಹಾನೂಭೂತಿ ಗಿಟ್ಟಿಸಿಕೊಂಡಿದ್ದಳು. ಯುವತಿಯ ಕಥೆ ಕೇಳಿದ ವ್ಯಕ್ತಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದು ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದರು. ಅವರ ಒಳ್ಳೆತನವನ್ನೆಲ್ಲ ದುರುಪಯೋಗ ಪಡಿಸಿದ ಯುವತಿ ವ್ಯಕ್ತಿಯ ಮಗುವನ್ನೆ ಕದ್ದು ಓಡಿ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ ಹೀಗಿದೆ-

ಅಕ್ಟೋಬರ್ ನಾಲ್ಕರಂದು ಈ ವ್ಯಕ್ತಿ ತಾಯಿ ಮಗುವಿಗೆ ಅಂಗಡಿಯಿಂದ ತಿಂಡಿ ಕೊಡಿಸಲು ಹೇಳಿ ಮಗುವನ್ನು ಅಂಜಲಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಂಜಲಿ ಮಗುವಿನೊಂದಿಗೆ ತಪ್ಪಿಸಿಕೊಂಡಿದ್ದಳು. ಅಂಗಡಿಗೆ ಹೋದವರು ಎಷ್ಟೇ ಸಮಯ ಆದರೂ ಮನೆಗೆ ಹಿಂದಿರುಗಿ ಬಂದಿಲ್ಲ. ನಂತರ ಪೊಲೀಸರಿಗೆ ದೂರು ನೀಡಲಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಗು ಮತ್ತು ಯುವತಿಯನ್ನು ಹುಡುಕಲು ಥಾಣೆ ಕ್ರೈಂ ಬ್ರಾಂಚ್ ಪೊಲೀಸ್ ಎಸ್ಸೈ ನಿತಿನ್ ಠಾಕ್ರೆ ನೇತೃತ್ವದಲ್ಲಿ ಪೊಲೀಸರ ಆರು ತಂಡಗಳನ್ನು ರಚಿಸಿದರು.

ಇದೇ ವೇಳೆ ಮಗು ಮತ್ತು ಯುವತಿ ಕಲ್ಯಾಣ್ ಫನ್ವೇಲ್ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಯುವತಿಯನ್ನು ಬಂಧಿಸಿ ಮಗುವನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ. ಭಾರತ ದಂಡ ಸಂಹಿತೆ ಕಲಂ 363 ಪ್ರಕಾರ ಯುವತಿಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply