ಆಗ್ರಾ : ತವರಿಗೆ ಹೋದ ಹೆಂಡತಿ ಮನೆಗೆ ಪತಿ ಕರೆದೂ ಬರಲು ತಯಾರಾಗದಿದ್ದಾಗ ಮನನೊಂದು ಪತಿಯೊಬ್ಬರು ತನ್ನ ಮಾವನ ಮನೆಯ ಮುಂದೆಯೇ ಸ್ವಯಂ ಬೆಂಕಿ ಹಚ್ಚಿದ ಘಟನೆ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ರಾಮಗಢ ಪೊಲೀಸ್ ವ್ಯಾಪ್ತಿಯ ಹೊಸ ಅಂಬೇಡ್ಕರ್ ನಗರ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪತಿ ದೇಹ ಶೇಕಡಾ ೬೦ ರಷ್ಟು ಸುಟ್ಟು ಹೋಗಿದ್ದು, ಕೊಡಲೇ ಸರ್ಕಾರಿ ಆಸ್ಪತ್ರೆ ಸಾಗಿಸಲಾಯಿತು. ಇದೀಗ ಪತಿ ಜೀವನ್ಮರಣದ ಹೋರಾಟದಲ್ಲಿದ್ದಾರೆ.

ಪೋಲೀಸರ ಪ್ರಕಾರ ಗುಲುರಿಯ ಪ್ರದೇಶದ ನಿವಾಸಿ ರೋಬ್ಬಿ ಫಿರೋಜಾಬಾದ್ ನಲ್ಲಿದ್ದ ತನ್ನ ಪತ್ನಿಯ ಮನೆಗೆ ಪತ್ನಿ ಪೂನಮ್ ರನ್ನು ಕರೆದು ಕೊಂಡು ಹೋಗಲು ಬಂದಿದ್ದರು. ಅಲ್ಲಿ ಪತ್ನಿ ಮತ್ತು ಮಾವನ ಮನೆಯವರೊಂದಿಗೆ ವಾಗ್ವಾದ ನಡೆದು, ಬಳಿಕ ಅವರು ಅಡುಗೆ ಮನೆಯಲ್ಲಿದ್ದ ಸೀಮೆ ಎಣ್ಣೆ ದೇಹಕ್ಕೆ ಸುರಿದು ಬೆಂಕಿ ಹಚ್ಚಿ ಕೊಂಡರು ಎಂದು ಹೇಳಿದ್ದಾರೆ.

ಅಲ್ಲಿ ಟಾಯ್ಲೆಟ್ ಇಲ್ಲದ ಕಾರಣ ತನ್ನ ಮಗಳು ಪತಿಯ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಳು. ಈ ಹಿಂದೆಯೇ ತನಗೆ ಎಂದುರಾಗುತ್ತಿರುವ ಮುಜುಗರದ ಬಗ್ಗೆ ಅವಳು ಪತಿಯೊಂದಿಗೆ ಹಲವು ಬಾರಿ ಹೇಳಿದ್ದಳು. ಆದರೆ ಆತ ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದ. ನಿನ್ನೆಯೂ ಪತಿ ಪತ್ನಿಯ ಮಧ್ಯೆ ಇದೇ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಈ ಬಾರಿ ರಾಬೀ ದೊಡ್ಡ ಅನಾಹುತ ಮಾಡಿಕೊಂಡರು ಎಂದು ಪೂನಮ್ ತಂದೆ ಮಹೇಂದ್ರ ಸಿಂಗ್ ಹೇಳಿದ್ದಾರೆ. ಇದುವರೆಗೆ ಯಾವುದೇ ಲಿಖಿತ ದೂರು ಬರದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಎಫ್ ಐ ಆರ್ ದಾಖಲಿಸಿದ್ದಾರೆ.

Leave a Reply