ಬೆಂಗಳೂರು: ರೈಲ್ವೆ ಟಿಕೆಟ್ ಬುಕ್ ಮಾಡುವ ಅಪ್ಲಿಕೇಶನ್ ನಲ್ಲಿ ಮುಜುಗರ ವುಂಟು ಮಾಡುವ ಅಶ್ಲೀಲ ಜಾಹೀರಾತು ಬಗ್ಗೆ ಪ್ರಶ್ನಿಸಿದ್ದ ಯುವಕನಿಗೆ ಭಾರತೀಯ ರೈಲ್ವೆ ಟ್ವೀಟ್ ಮೂಲಕ ಉತ್ತರ ನೀಡಿದ್ದು, ಆ ಉತ್ತರ ವೈರಲ್ ಆಗಿದೆ.

ಆನಂದ್ ಕುಮಾರ್ ಯುವಕ ರೈಲ್ವೆ ಆಪ್ ನಲ್ಲಿ ಬರುವ ಇಂತಹ ಜಾಹಿರಾತಿನ ಬಗ್ಗೆ ರೈಲ್ವೆ ಇಲಾಖೆ, ಐಆರ್‌ಸಿಟಿಸಿ ಕಚೇರಿ ಮತ್ತು ರೈಲ್ವೆ ಮಂತ್ರಿ ಪಿಯೂಷ್‌ ಗೋಯಲ್‌ ಗಮನ ಹರಿಸಬೇಕು ಎಂದು ಟ್ವೀಟ್ ಮಾಡಿದ್ದಕ್ಕೆ ಐಆರ್‌ಸಿಟಿಸಿ ಮರು ಟ್ವೀಟ್ ಮಾಡಿ ಮತ್ತೊಮ್ಮೆ ಮುಜುಗರವಾಗುವಂತಹ ಉತ್ತರ ನೀಡಿದೆ. ಜಾಹೀರಾತುಗಳನ್ನು ತೋರಿಸಲು ADX ಮತ್ತು Googles ಜಾಹೀರಾತು ಸೇವೆ ಸಾಧನವನ್ನು Irctc ಬಳಸುತ್ತದೆ. ಈ ಜಾಹೀರಾತುಗಳು ಬಳಕೆದಾರರನ್ನು ಗುರಿಯಾಗಿರಿಸಲು ಕುಕೀಗಳನ್ನು ಬಳಸುತ್ತದೆ. ಬಳಕೆದಾರರ ಮೊಬೈಲ್ ಹಿಸ್ಟರಿ ಮತ್ತು ಬ್ರೌಸಿಂಗ್ ನಡವಳಿಕೆ ಆಧರಿಸಿ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಇಂತಹ ಜಾಹೀರಾತುಗಳನ್ನು ತಪ್ಪಿಸಲು ಎಲ್ಲಾ ಬ್ರೌಸರ್ ಕುಕೀಸ್ ಮತ್ತು ಮೊಬೈಲ್ ಹಿಸ್ಟರಿ ಯನ್ನು ಅಳಿಸಿಹಾಕಿ ಎಂದು ರೈಲ್ವೆ ಇಲಾಖೆ ಉತ್ತರಿಸಿದೆ.
ಈ ಬಗ್ಗೆ ಆನಂದ್‌ ಕುಮಾರ್‌ ರವರ ಮೇಮ್ಸ್‌, ಟ್ರೋಲ್‌ಗಳು ಟ್ವಿಟರ್ ನಲ್ಲಿ ಹರಿದಾಡುತ್ತಿವೆ.

https://twitter.com/hiteshkundlia/status/1133809558235754497

 

Leave a Reply