ದ್ವೇಷ ಮನದಲ್ಲಿ ಇದ್ದರೆ ಅದು ಹಿಂಸೆಯನ್ನು ಪ್ರಚೋದಿಸುತ್ತದೆ. ಪ್ರೀತಿ ಅದಕ್ಕಿರುವ ಅನುಪಮ ಮದ್ದಾಗಿದೆ.
25 ವರ್ಷಗಳ ಹಿಂದೆ ಬಾಬರಿ ಮಸೀದಿ ಒಡೆಯಲು ಕರಸೇವಕರಾಗಿ ಹೋದ ವ್ಯಕ್ತಿ ತನ್ನ ಮನದಾಳದ ಮಾತನ್ನು ಹೇಳುತ್ತಾರೆ.
ಇಪ್ಪತ್ತೈದು ವರ್ಷಗಳ ಹಿಂದೆ ಅವರು ಮೊಹಮ್ಮದ್ ಅಮೀರ್ ಆಗಿರಲಿಲ್ಲ. ಬಲ್ಬಿರ್ ಸಿಂಗ್ ಆಗಿದ್ದ ಅವರು ಬಾಬರಿ ಮಸೀದಿ ಉರುಳಿಸುವಲ್ಲಿ ಸಕ್ರಿಯವಾಗಿದ್ದರು.
“ನಾನು ರಜಪೂತ. ನಾನು ಪಾಣಿಪತ್ ಸಮೀಪದ ಹಳ್ಳಿಯಲ್ಲಿ ಹುಟ್ಟಿದ್ದೇನೆ. ನನ್ನ ತಂದೆ, ದೌಲತ್ರಾಮ್, ಶಾಲಾ ಶಿಕ್ಷಕರಾಗಿದ್ದರು. ಅವರು ನಿಷ್ಠ ಗಾಂಧೀವಾದಿಯಾಗಿದ್ದರು.
ಅವರು ವಿಭಜನೆಯ ಭೀತಿಯನ್ನು ನೋಡಿದ್ದರು. ನಮ್ಮ ಪ್ರದೇಶದಲ್ಲಿ ಮುಸ್ಲಿಮರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಮತ್ತು ನನ್ನ ಮೂವರು ಹಿರಿಯ ಸಹೋದರರು ಅದೇ ರೀತಿ ಮಾಡಲು ಬಯಸಿದ್ದರು”
ಹತ್ತು ವರ್ಷ ವಯಸ್ಸಿನವನಾಗಿದ್ದಾಗ, ಬಲ್ಬೀರ್ ಕುಟುಂಬವು ಗ್ರಾಮದಿಂದ ಪಾಣಿಪತ್ಗೆ ತೆರಳಿತು. ಅಲ್ಲಿ ಮಕ್ಕಳು ತಮ್ಮ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಅಲ್ಲಿ ಪ್ರತಿಕೂಲ ಪರಿಸ್ಥಿತಿ ಇತ್ತು. ವಿಶೇಷವಾಗಿ ಹರ್ಯಾಣದ ಹಳ್ಳಿ ಮಕ್ಕಳು. ಇತರ ಮಕ್ಕಳು ನಮ್ಮ ಜೊತೆಗೆ ಆಟ ಆಡುತ್ತಿರಲಿಲ್ಲ. ಸ್ಥಳೀಯ ಆರ್ ಎಸ್ ಎಸ್ ಶಾಖೆಯಲ್ಲಿ ಅವರು ಯಾವುದೇ ತಾರತಮ್ಯ ಇಲ್ಲವೆಂದು ಮಾತ್ರ ಬಲ್ಬೀರ್ ಕಂಡುಕೊಂಡರು. ಅಲ್ಲಿಯೇ ಮೊದಲ ಬಾರಿಗೆ ನನ್ನನ್ನು ‘ಆಪ್’ ಎಂದು ಕರೆದರು. ಅದು ನನಗೆ ತುಂಬಾ ಹಿಡಿಸಿತು. ಇದು ಅವರೊಂದಿಗೆ ನನ್ನ ಸಹಯೋಗದ ಆರಂಭ ಆಗಿತ್ತು. ಹತ್ತು ವರ್ಷಗಳ ಬಳಿಕ ಶಿವಸೇನೆ ಸೇರಿದೆ. ಮದುವೆಯಾಗಿ ಸಹೋದರರ ಜೊತೆ ಕುಟುಂಬದ ವ್ಯಾಪಾರದಲ್ಲಿ ತೊಡಗಿದೆ. ಜೊತೆಜೊತೆಗೆ ಮಹಾರಿಷಿ ಯುನಿವರ್ಸಿಟಿಯಿಂದ ಮೂರು ಸ್ನಾತಕೋತ್ತರ ಪದವಿ ಪಡೆದೆ. ಆದರೂ ಗಾಂಧಿವಾದಿ ಮನೆಯಲ್ಲಿ ನಾನೊಬ್ಬ ಚಡ್ಡಿವಾಲ ನಾಗಿ ಗುರುತಿಸಿಕೊಂಡಿದ್ದೆ.
ಜನರು ನಾನು ಹಾರ್ಡ್-ಕೋರ್ ಹಿಂದೂ ಮತಾಂಧರೆಂದು ಭಾವಿಸಿದ್ದರು, ಆದರೆ ಅದು ನಿಜವಾಗಿ ಬ್ರೇನ್ ವಾಷ್ ಬಹಳ ಸುಲಭ. ಯಾಹ್ ಭವನಯ್ನ್ ಈ ಭಾವನೆಗಳು ಆಳವಾಗಿ ಬೇರೂರಿದೆ. ಈ ಮುಸ್ಲಿಮರು ಭಾರತದ ಹೊರಗಿನಿಂದ ಬಂದಿದ್ದು ನಮ್ಮ ಭೂಮಿಯನ್ನು ಕಿತ್ತು ನಮ್ಮ ದೇವಾಲಯಗಳನ್ನು ನಾಶಮಾಡಿದ್ದರು ಎಂದು ಭಾವಿಸಿದ್ದೆವು.
ಹರ್ಯಾಣದಲ್ಲಿ ಪೌರುಷಕ್ಕೆ ಬೆಲೆ ಕೊಡುತ್ತಾರೆ. ಕರ ಸೇವಕನಾಗಿ ಹೋಗುವಾಗ ಕುಚ್ ಕರೆ ಬಿನಾ ಮತ್ ಆನಾ ಎಂದು ಸ್ನೇಹಿತರು ಹೇಳಿದ್ದರು. ಐಬಿಯವರಿಗೂ ನನ್ನ ಮೇಲೆ ಕಣ್ಣಿತ್ತು.
ಅಯೋಧ್ಯೆಯಲ್ಲಿ ಡಿಸೆಂಬರ್ 5 ರಂದು ಸಾವಿರಾರು ಕರಸೇವಕರೊಂದಿಗೆ ಇದ್ದೆವು. ಅಡ್ವಾಣಿಯವರು ಮುಖ್ಯವಾಗಲಿಲ್ಲ. ಏಕೆಂದರೆ ಅವರು ಝುಲೇಲಾಲ್ನನ್ನು (ಸಿಂಧಿಗಳ ಸಮುದಾಯದ ದೇವರು) ಆರಾಧಕರಾಗಿದ್ದರು. ಆದ್ದರಿಂದ ಹಿಂದೂ ಎಂದು ಪರಿಗಣಿಸಲಾಗಲಿಲ್ಲ. ಉಮಾ ಭಾರತಿ ನಾಟಕ ರಾಣಿಯಾಗಿದ್ದರು. ನನ್ನ ಹತ್ತಿರದ ಸ್ನೇಹಿತ ಯೋಗೆಂದರ್ ಪಾಲ್ನೊಂದಿಗೆ ನಾನು ಇದ್ದೆ. ನಾವೆಲ್ಲರೂ ತಾಳ್ಮೆ ಕಳಕೊಂಡಿದ್ದೆವು.
ಆ ದಿನ ನಾನು ಬಹಳ ರೋಷದಲ್ಲಿ ಇದ್ದೆ. ಮೇಲೆ ಹೆಲಿಕಾಪ್ಟರ್ ನೋಡಿ ಭಯವಾಯಿತು. ನಂತರ ಎಲ್ಲರೂ ಒಟ್ಟಾದ ಬಳಿಕ ಗುಂಬಜವನ್ನು ಹೊಡೆದು ಉರುಳಿಸಿದೆವು.
ಅಲ್ಲಿಂದ ವಿಜಯಶಾಲಿಯಾಗಿ ಹಿಂತಿರುಗಿದ ಅನುಭವ ಆಗಿತ್ತು. ಮನೆಗೆ ಬಂದಾಗ ತಂದೆಯವರು ಕುಪಿತರಾಗಿದ್ದರು. ಒಂದೋ ಈ ಮನೆಯಲ್ಲಿ ನೀನಿರಬೇಕು ಇಲ್ಲವೇ ನಾನಿರಬೇಕು. ನಾನೇ ಹೊರ ಹೋಗುವುದಾಗಿ ತೀರ್ಮಾನಿಸಿದ. ಪತ್ನಿ ಅಂದು ನನ್ನ ಜೊತೆ ಬರಲಿಲ್ಲ. ನಾನು ಒಬ್ಬಂಟಿಯಾಗಿ ಮನೆ ಬಿಟ್ಟೆ. ಮಾರ್ಗದ ಬದಿಯಲ್ಲಿ, ಬಿಲ್ಡಿಂಗ್ ಕಟ್ಟಡದಲ್ಲಿ ಚಳಿಗಾಲದ ರಾತ್ರಿ ಸಮಯ ಈಗಲೂ ನೆನಪಾಗುತ್ತದೆ. ಗಡ್ಡದವರನ್ನು ಕಂಡರೆ ಭಯ ಆಗುತ್ತಿತ್ತು.
ಮನೆಯಿಂದ ಹೊರ ಬಂದ ಹಲವು ದಿನಗಳ ಬಳಿಕ ತಂದೆ ತೀರಿದ ಸುದ್ದಿ ತಿಳಿದು ಮನೆಗೆ ಹೋದೆ. ಮಬೆಯವರು ಸ್ವೀಕರಿಸಲು ತಯಾರಿರಲಿಲ್ಲ. ಅಪ್ಪನ ಸಾವಿಗೆ ನಾನೇ ಕಾರಣ ಎಂದು ಸಹೋದರ ಹೇಳಿದರು.
ಇದಕ್ಕಿಂತ ದೊಡ್ಡ ಆಘಾತ ಅವರಿಗೆ ಆದದ್ದು ಬೇರೆ ವಿಷಯ ಆಗಿತ್ತು. ಅಯೋಧ್ಯೆಯಲ್ಲಿ ಅವರ ಆಪ್ತ ಸ್ನೇಹಿತ ಮತ್ತು ಸಹಯೋಗಿ ಯೋಗೇಂದ್ರ ಪಾಲ್ ಮುಸ್ಲಿಮರಾಗಿದ್ದರು. ಡಿಸೆಂಬರ್ 6 ರ ಘಟನೆಯ ಬಳಿಕ ಅವರು ಸುತ್ತ ಮುತ್ತಲಿನ ಘಟನೆಗಳನ್ನೆಲ್ಲಾ ನೋಡಿ ಹುಚ್ಚರಂತಾಗಿದ್ದರು. ಮನಸ್ಸಿನ ಶಾಂತಿಗಾಗಿ ಇಸ್ಲಾಂ ಸ್ವೀಕರಿಸಬೇಕಾಯಿತು ಎಂದು ಹೇಳಿದರು. ಅವನೊಂದಿಗೆ ಮಾತನಾಡುವಾಗ, ನಾನು ಮಾಡಿದ ಪಾಪದ ಕಾರಣದಿಂದಾಗಿ ನಾನು ಹುಚ್ಚುತನಕ್ಕೆ ಹೋಗುತ್ತಿದ್ದೇನೆ ಎಂಬ ಭಾವನೆಯಾಯಿತು.
ನಿಜವಾಗಿ ನಾನಾಗಲೇ ಹುಚ್ಚನಂತಾಗಿದ್ದೆ.
ನನ್ನ ಸ್ನೇಹಿತ ನನ್ನನ್ನು ಓರ್ವ ಮೌಲಾನಾರ ಬಳಿ ಕರೆದುಕೊಂಡು ಹೋದರು. ನನಗೆ ಇಸ್ಲಾಂ ಸ್ವೀಕರಿಸುವ ವಿಶ್ವಾಸ ಇರಲಿಲ್ಲ. ಅವರ ಸೌಮ್ಯ ಮಾತು ಕೇಳಿ ಅಲ್ಲಿ ಹೋಗಿ ನನಗರಿಯದಂತೆ ನಾನು ಅತ್ತು ಬಿಟ್ಟೆ. ಕೆಲವು ತಿಂಗಳ ಬಳಿಕ ಇಸ್ಲಾಂ ಸ್ವೀಕರಿಸಿದೆ. ನಂತರ
ನನ್ನ ಪತ್ನಿ ನನ್ನನ್ನು ಸೇರಿಕೊಂಡಳು. ಕುಟುಂಬ ಮುಂದಯವರಿಯಿತು.