ಬೇಕಾಗುವ ಸಾಮಗ್ರಿಗಳು: –

ಒಂದು ಬಟ್ಟಲು ಮಂಡಕ್ಕಿ,
ಒಂದು ಲೋಟ ಬೆಲ್ಲ,
ಒಂದು ಕಪ್ ಸಕ್ಕರೆ,
1 ಕಪ್ ಗೋಡಂಬಿ ಹುಡಿ,
ಒಂದು ಕಪ್ ತೆಳ್ಳಗೆ ಹೆಚ್ಚಿದ ಕೊಬ್ಬರಿ.

ತಯಾರಿಸುವ ವಿಧಾನ:

ಸಕ್ಕರೆ-ಬೆಲ್ಲ ಸೇರಿಸಿ ಹದವಾದ ಪಾಕ ತಯಾರಿಸಿ, ನಂತರ ಅದಕ್ಕೆ ಗೋಡಂಬಿ ಹುಡಿ, ಹೆಚ್ಚಿದ ಕೊಬ್ಬರಿ ಸೇರಿಸಿ.
ಈಗ ಸಣ್ಣ ಉರಿಯಲ್ಲಿ ಹುರಿದ ಮಂಡಕ್ಕಿಯನ್ನು ಪಾಕವಿರುವ ಬಾಣಲೆಗೆ ಹಾಕಿ ಚೆನ್ನಾಗಿ ಕುಲುಕಿ ಪಾಕದ ಬಿಸಿ ಆರುತ್ತಿದ್ದಂತೆಯೇ ಲಡ್ಡು ತಯಾರಿಸಿ. ಚಹ-ಕಾಫಿಯೊಂದಿಗೆ ಈಗ ಲಡ್ಡು ಸವಿಯಲು ಸಿದ್ದ.

Leave a Reply