ಮಂಡ್ಯ: ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಕಂಡು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ತಮ್ಮ ಕಾರನ್ನು ನಿಲ್ಲಿಸಿ ಬಾಲಕಿಯ ಕಷ್ಟವನ್ನು ಆಲಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಕೆ.ಆರ್.ಎಸ್ ನಿಂದ ರಾಮನಗರಕ್ಕೆ ಹೋಗುತ್ತಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವರು ಅದೇ ಮಾರ್ಗ ಮಧ್ಯೆ ಬೆಳಗೊಳ ಗ್ರಾಮದ ಶ್ರೀರಂಗಪಟ್ಟಣದ ರಸ್ತೆ ಬದಿಯಲ್ಲಿ ಹೂವನ್ನು ಮಾರುತ್ತ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿ ಕುಳಿತ್ತಿದ್ದಳು. ಈ ವೇಳೆ ಕುಮಾರಸ್ವಾಮಿ ಹೂ ಮಾರುತ್ತಾ ಕುಳಿತ್ತಿದ್ದ ಬಾಲಕಿಯನ್ನು ನೋಡಿ ರಸ್ತೆ ಮಧ್ಯೆಯೇ ಆಕೆಯ ಬಳಿ ಕಾರನ್ನ ನಿಲ್ಲಿಸಿ ಮಾತನಾಡಿದ್ದಾರೆ.
ಬಾಲಕಿ ತಮ್ಮ ಮನೆಯ ಸಂಕಷ್ಟವನ್ನು ಕುಮಾರಸ್ವಾಮಿಗೆ ಹೇಳಿಕೊಂಡಿದ್ದಾಳೆ. ಬಳಿಕ ಬಾಲಕಿಯ ಕಷ್ಟವನ್ನು ಆಲಿಸಿದ ಸಿಎಂ ಗ್ರಾಮಸ್ಥರಿಗೆ ಆಕೆಯ ತಂದೆಗೆ ತನ್ನನ್ನು ಕಾಣುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಅವರು ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿ ರಾಮನಗರಕ್ಕೆ ತೆರಳಿದ್ದಾರೆ. ಇತ್ತ ಗ್ರಾಮಸ್ಥರು ಕೂಡು ಸಿಎಂ ಅವರ ಸರಳತೆಯನ್ನ ಕಂಡು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.