ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪಾರಿಕ್ಕರ್‍ರನ್ನು ಮುಂದುವರಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ತನ್ನ ಟ್ವಿಟರ್ ಹ್ಯಾಂಡಲ್‍ನಲ್ಲಿ ಈ ವಿಷಯವನ್ನು ತಿಳಿಸಿದ್ದು, ಪಾರಿಕ್ಕರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾದರೂ ಸಚಿವ ಸಂಪುಟವನ್ನು ಪುನರ್ರಚಿಸಲಾಗುವುದು ಎಂದು ತಿಳಿಸಿದರು.
ಗೋವದಲ್ಲಿ ಬಿಜೆಪಿ ನಾಯಕರೊಡನೆ ಚರ್ಚಿಸಿದ ಬಳಿಕ ಅಮಿತ್ ಶಾ ಈ ಘೋಷಣೆ ಹೊರಡಿಸಿದ್ದಾರೆ.

ಮನೋಹರ್ ಪಾರಿಕ್ಕರ್ ದಿಲ್ಲಿ ಏಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಕಾಂಗ್ರೆಸ್ ಅವಿಶ್ವಾಸ ಮಂಡಿಸಲು ಮುಂದಾಗಿದೆ. ನಲ್ವತ್ತು ಸದಸ್ಯರ ವಿಧಾನ ಸಭೆಯಲ್ಲಿ ಕಾಂಗ್ರೆಸ್ಸಿಗೆ 16 ಶಾಸಕರಿದ್ದಾರೆ. ಬಿಜೆಪಿ 14 ಸದಸ್ಯರನ್ನು ಹೊಂದಿದೆ. ಗೋವಾ ಫಾರ್ವರ್ಡ್ ಪಾರ್ಟಿ,ಮಹಾರಾಷ್ಟ್ರ ಗೋಮಂತಕ ಪಾರ್ಟಿ, ಎನ್‍ಸಿಪಿ, ಪಕ್ಷೇತರರ ಬೆಂಬಲದಲ್ಲಿ ಬಿಜೆಪಿ ಸರಕಾರ ಅಲ್ಲಿರಚಿಸಿದೆ. ಗೋವಾ ಮುಂಬೈ ನ್ಯೂಯಾರ್ಕ್‍ಗಳಲ್ಲಿ ಚಿಕಿತ್ಸೆ ಪಡೆದಿರುವ ಪಾರಿಕ್ಕರ್ ಈಗ ಹೊಸದಿಲ್ಲಿಯ ಆಲ್ ಇಂಡಿಯ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸಯಿನ್ಸ್ನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

Leave a Reply