ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಸೋತಿದ್ದು, ಮಾಧ್ಯಮ ವರದಿಯ ಪ್ರಕಾರ ಮನೋಜ್ ತಿವಾರಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಚುನಾವಣಾ ಫಲಿತಾಂಶದ ನಂತರ ಕೆಲವು ಫೇಸ್ಬುಕ್ ಪೇಜ್ ನಲ್ಲಿ ಮನೋಜ್ ತಿವಾರಿ ಭಾವುಕರಾಗಿ ಅಳುವ ವಿಡಿಯೋ ವೈರಲ್ ಆಗಿದೆ. ಆದರೆ ನಿಜವಾಗಿ ಮನೋಜ್ ತಿವಾರಿ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆಯೇ?

ಆದರೆ ಫಲಿತಾಂಶದ ನಂತರ ಟಿವಿ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿವಾರಿ ಕಣ್ಣೀರು ಹಾಕಿದ್ದಾರೆಯೇ?

Exit poll pe hansi aati hai ab rona aa raha hai

Posted by Md Ayaz Khan on Tuesday, February 11, 2020

ಇಂಡಿಯಾ ಟುಡೇ ಈ ವಿಡಿಯೋ ಕುರಿತು ಫ್ಯಾಕ್ಟ್ ಚೆಕ್ ಮಾಡಿದ್ದು, ಈ ನಿರ್ದಿಷ್ಟ ಸಂದರ್ಶನದ ವಿಡಿಯೋ ಒಂದು ತಿಂಗಳ ಹಿಂದಿನದ್ದಾಗಿದೆ ಎಂದು ತಿಳಿದು ಬಂದಿದೆ. ಯೌಟ್ಯೂಬ್ ನಲ್ಲಿ ಈ ವಿಡಿಯೋ ಹುಡುಕಿದಾಗ ಇದು ಜನವರಿ 14, 2020 ರಂದು ಟಿವಿ 9 ಭಾರತ್ವರ್ಷ್ ಅವರು ಅಪ್‌ಲೋಡ್ ಮಾಡಿದ್ದಾಗಿ ಕಂಡುಕೊಳ್ಳಲಾಗಿದೆ. ಇದರಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಯಾಕೆ ಭಾವುಕರಾದರು ಎಂಬುದನ್ನು ನೋಡಬಹುದು. ಆರಂಭಿಕ ಜೀವನದ ಹೋರಾಟದ ಬಗ್ಗೆ ವಿವಿರ ನೀಡುವಾಗ ಅವರು ಭಾವುಕರಾದರು.

LEAVE A REPLY

Please enter your comment!
Please enter your name here