ಭುವನೇಶ್ವರ: ಭಾರತ ಹಾಕಿ ತಂಡದ ನೂತನ ನಾಯಕರಾಗಿ ಮಿಡ್ ಫೀಲ್ಡರ್ ಮನಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ. ಇದುವರೆಗೆ ಪಿ ಆರ್ ಶ್ರೀಜೇಶ್ ನಾಯಕರಾಗಿದ್ದರು.

ಮುಂದಿನ ತಿಂಗಳು ಮಸ್ಕತ್ ನಲ್ಲಿ ನಡೆಯುವ ಏಷಿಯನ್ ಚಾಂಪಿಯನ್ಷಿಪ್ ಟ್ರೋಫಿಯಲ್ಲಿ ಮನಪ್ರೀತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಸರ್ದಾರ್ ಸಿಂಗ್ ನಿವೃತ್ತಿಗೊಂಡ ನಂತರ ಭಾರತದ ಹಾಕಿ ತಂಡದ ಇದು ಪ್ರಮುಖ ಪಂದ್ಯಾವಳಿಯಾಗಿದೆ. ಅಕ್ಟೊಬರ್ 18 ರಿಂದ ನಡೆಯುವ ಈ ಪಂದ್ಯಾವಳಿಗೆ 18 ಹಾಕಿ ಆಟಗಾರರ ಪಟ್ಟಿಯನ್ನು ಈಗಾಗಲೇ ಸಿದ್ಧ ಪಡಿಸಲಾಗಿದೆ.

Leave a Reply