ಉತ್ತರಾಖಂಡ್ನಲ್ಲಿ ಫ್ಲೋಟಿಂಗ್ ರೆಸ್ಟಾರೆಂಟ್ ಅಂದರೆ ನೀರಿನಲ್ಲಿ ತೇಲುವ ಹೋಟೆಲ್ ಮಗುಚಿ ಬಿದ್ದ ಘಟನೆ ವರದಿಯಾಗಿದೆ. ಈ ರೆಸ್ಟೋರೆಂಟನ್ನು ಈ ಹಿಂದೆ ಕ್ಯಾಬಿನೆಟ್ ಸಭೆ ಮಾಡಲು ಬಳಸಲಾಗಿತ್ತು. ಮರೀನಾ ರೆಸ್ಟೋರೆಂಟ್ ಎಂದು ಕರೆಯಲ್ಪಡುವ ಈ ತೇಲುವ ರೆಸ್ಟೋರೆಂಟ್ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದು, ಮಂಗಳವಾರ, ಲೇಕ್ನಲ್ಲಿ ಈ ಮರೀನಾ ರೆಸ್ಟೋರೆಂಟ್ ಮಗುಚಿ ಬಿದ್ದಿದೆ.
“ನಮ್ಮ ಅಧಿಕಾರಿಗಳು ಸ್ಥಳದಲ್ಲೇ ಇದ್ದರು ಈ ದುರ್ಘಟನೆ ಹೇಗೆ ಸಂಭವಿಸಿತು ಎಂದು ನಾವು ಕಂಡುಕೊಳ್ಳುತ್ತೇವೆ.” ಎಂದು ತೆಹ್ರಿ ಜಿಲ್ಲಾಧಿಕಾರಿ ಹೇಳಿದ್ದಾರೆ, ಈ ರೆಸ್ಟಾರೆಂಟ್ನಲ್ಲಿ, ಮುಖ್ಯಮಂತ್ರಿ ತ್ರಿವೇಂದ್ರಂ ಸಿಂಗ್ ರಾವತ್ ಅವರು 2018 ರಲ್ಲಿ ಕ್ಯಾಬಿನೆಟ್ ಸಭೆಯನ್ನು ನಡೆಸಿದ್ದರು.

Leave a Reply