ಪಾಟ್ನಾ: 29 ವರ್ಷದ ಎಂಜಿನಿಯರನ್ನು ಅಪಹರಿಸಿ ತಲೆಗೆ ಗನ್ ಇಟ್ಟು ಮಹಿಳೆಯೊಬ್ಬಳನ್ನು ಮದುವೆಯಾಗಲು ಒತ್ತಾಯಸಿದ ಘಟನೆ ನಡೆದಿದೆ.

ವಿವಾಹದ ಕಾರ್ಯಕ್ರಮದ ವೀಡಿಯೋ ವೈರಲ್ ಆಗಿದೆ. ಬೊಕೊರೊ ಉಕ್ಕಿನ ಸ್ಥಾವರದಲ್ಲಿ ಕಿರಿಯ ವ್ಯವಸ್ಥಾಪಕರಾದ ವಿನೋದ್ ಕುಮಾರ್ ರನ್ನು ಪಟ್ನಾದ ಪಾಂಡಾರಕ್ ಪ್ರದೇಶದಲ್ಲಿ ಮದುವೆ ಕರ್ಮ ಮುಗಿಸಲು ಬಲವಂತ ಪಡಿಸಲಾಗಿದೆ.
ನಿನ್ನ ಮದುವೆಗೆ ಒತ್ತಾಯ ಪಡಿಸುತ್ತಿದ್ದೇವೆ. ಗಲ್ಲಿಗೇರಲು ಒತ್ತಾಯ ಪಡಿಸುತ್ತಿಲ್ಲ ಎಂದು ವಿವಾಹ ಆಗಲು ನಿರಾಕರಿಸಿದ ಯುವಕನಲ್ಲಿ ಸಂಬಂಧಿಕರು ಹೇಳಿದ್ದಾರೆ.
ತನ್ನ ತಲೆಗೆ ಬಂದೂಕು ಇಟ್ಟು ಮದುವೆಗೆ ಬಲವಂತ ಪಡಿಸಲಾಯಿತು ಎಂದು ಪೊಲೀಸರಲ್ಲಿ ಯುವಕ ಆರೋಪಿಸಿದ್ದು ತನಿಖೆ ಮುಂದುವರೆಸಲಾಗಿದೆ.

ವೀಡಿಯೋ ಕೃಪೆ : ಎನ್ಡಿ ಟಿವಿ

Leave a Reply