ಮುಂಬೈ: ಶ್ರೀಲಂಕಾ ಕ್ರಿಕೆಟ್‍ನ ಮಾಜಿ ನಾಯಕ ಹಾಲಿ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗರ ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದ ನಂತರ ಈಗ ಶ್ರೀಲಂಕಾದ ಫಾಸ್ಟ್ ಬೌಲರ್ ಲಸಿತ್ ಮಾಲಿಂಗ ವಿರುದ್ಧ ಮೀಟೂ ಕುಣಿಕೆ ಬಿದ್ದಿದೆ.

ತಮಿಳು ಗಾಯಕಿ ಚಿನ್ಮಯಿ ಮಾಲಿಂಗ ವಿರುದ್ಧ ಆರೋಪ ಹೊರಿಸಿದ್ದು ಮಾಲಿಂಗ ಓರ್ವ ಯುವತಿಗೆ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈಯಲ್ಲಿ ಐಪಿಎಲ್ ಸೀಝನ್‍ನಲ್ಲಿ ಈ ಘಟನೆ ನಡೆದಿತ್ತು. ಈ ಹೆಸರು ಬಹಿರಂಗಪಡಿಸಲಿಚ್ಛಿಸದ ಮಹಿಳೆಯ ಹೇಳಿಕೆ ಎನ್ನುವ ಹೆಸರಿನಲ್ಲಿ ಮಾಲಿಂಗ ವಿರುದ್ಧ ಚಿನ್ಮಯಿ ಆರೋಪ ಹೊರಿಸಿದ್ದಾರೆ.

ಗೆಳೆಯನ ಭೇಟಿಗೆ ಹೊಟೇಲ್‍ಗೆ ಬಂದಿದ್ದ ಮಹಿಳೆಯನ್ನು ಮಾಲಿಂಗ ಮೋಸ ಮಾಡಿ ತನ್ನ ಕೋಣೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಲು ಯತ್ನಿಸಿದ್ದರು. ಕೋಣೆಗೆ ಮದ್ಯ ನೀಡಲು ಹೊಟೇಲ್ ಸಿಬ್ಬಂದಿ ಬಂದದ್ದರಿಂದ ಮಹಿಳೆ ಪಾರಾಗಿದ್ದರು ಎಂದು ಚಿನ್ಮಯಿ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ.

ಈ ಹಿಂದೆ ಶ್ರೀಲಂಕದ ಮಾಜಿ ಕ್ಯಾಪ್ಟನ್ ರಣತುಂಗರ ವಿರುದ್ಧ ಮುಂಬೈಯ ವಿಮಾನ ಪರಿಚಾರಿಕೆ ಕೂಡ ಇಂತಹುದೆ ಆರೋಪ ಹೊರಿಸಿದ್ದಾರೆ. ಮೀಟು ಈಗ ಪ್ರಮುಖರ ಜೀವನದಲ್ಲಿ ಬಿರುಗಾಳಿಯೆಬ್ಬಿಸುತ್ತಿದೆ.

Leave a Reply