ಹೊಸದಿಲ್ಲಿ: ಭಾರತದಲ್ಲಿಯೂ ಮೀಟು ಕ್ಯಾಂಪೆಯಿನ್ ಮೂಲಕ ಮಹಿಳೆಯರು ತಮಗಾದ ಅನುಭವಗಳನ್ನು ಬಹಿರಂಗೊಳಿಸುತ್ತಿರುವುದು ಸಂತೋಷ ಕೊಡುತ್ತಿದೆ ಎಂದು ಮಹಿಳಾ -ಶಿಶುಕಲ್ಯಣ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಲೈಂಗಿಕ ಕಿರುಕುಳಗಳಿಂದಾಗಿರುವ ನೋವು ಬೇಗನೆ ಇಲ್ಲವಾಗದು. ವರ್ಷಗಳೇ ಸಂದು ಹೋದರೂ ಹಿಂದೆ ನಡೆದ ಲೈಂಗಿಕ ಕಿರುಕುಳಗಳ ದಾಳಿಗಳಲ್ಲಿ ದೂರು ನೀಡಲು ಸಾಧ್ಯವಾಗಬೇಕೆಂದು ಮೇನಕಾ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ಆಗುವ ಲೈಂಗಿಕ ಅತಿಕ್ರಮಗಳು ವರ್ಷಗಳ ನಂತರ ದೂರು ನೀಡುವ ರೀತಿಯಲ್ಲಿ ಕಾನೂನು ನಿರ್ಮಿಸಬೇಕೆಂದು ಕಾನೂನು ಸಚಿವರಲ್ಲಿ ಮನವಿ ಮಾಡಿದ್ದೇನೆ. ಈಗ 468 ಸೆಕ್ಷನ್ ಪ್ರಕಾರ ಮಕ್ಕಳ ವಿರುದ್ಧ ದೌರ್ಜನ್ಯ ನಡೆದರೆ ಮೂರು ವರ್ಷಗಳಲ್ಲಿ ದೂರು ನೀಡಬಹುದಾಗಿದೆ.

ಮೀಟು ಅಭಿಯಾನದಲ್ಲಿ ಕೆಲವರು ಯಾರನ್ನೂ ಗುರಿಯಾಗಿಸಿ ದಾಳಿ ಮಾಡಬೇಡಿ ಎಂದು ಸಚಿವೆ ಮುನ್ನೆಚ್ಚರಿಕೆ ನೀಡಿದರು. ನಟ ನಾನಾ ಪಟೇಕರ್ ವಿರುದ್ಧ ಕಿರುಕುಳ ಆರೋಪ ಹೊರಿಸಿದೆ ನಟಿ ತನುಶ್ರೀ ದತ್ತರನ್ನು ಮೇನಕಾ ಗಾಂಧಿ ಬೆಂಬಲಿಸಿದ್ದಾರೆ.

Leave a Reply