ಸಾಂದರ್ಭಿಕ ಚಿತ್ರ

ಮೀಟೂ ಗೂಗಲ್ ನೌಕರರಿಗೂ ಬಿಸಿ ಮುಟ್ಟಿಸಿದೆ. ಗೂಗಲ್ ಉದ್ಯೋಗಸ್ಥರಿಗೆ ಕಳುಹಿಸಿದ ಪತ್ರದಲ್ಲಿ ಈ ವಿಷಯವನ್ನು ಗೂಗಲ್ ಮುಖ್ಯಸ್ಥ ಸುಂದರ್ ಸ್ಪಷ್ಟಪಡಿಸಿದ್ದಾರೆ. ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ಹಿರಿಯ 13 ಮ್ಯಾನೇಜರ್ ಗಳ ಸಹಿತ 48 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅವರಿಗೆ ಯಾವುದೇ ನಷ್ಟ ಪರಿಹಾರ ಕೂಡಾ ನೀಡಲಾಗಿಲ್ಲ.

ಕಳೆದೆರಡು ವರ್ಷಗಳ ನಡುವೆ 48 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲೈಂಗಿಕ ಶೋಷಣೆಗಳನ್ನು ನೋಡಿ ಸುಮ್ಮನಿರಲಾಗದು ಎಂದು ಗೂಗಲ್ ಸ್ಪಷ್ಟ ಪಡಿಸಿದೆ.

ಬಾಲಿವುಡ್‍ನಲ್ಲಿ ಮೀಟೂ ಅಭಿಯಾನ ತೀವ್ರ ತೆರನಾಗಿ ಜಾರಿಯಲ್ಲಿದೆ. ನಟಿ ಮಣಿಗಳೆಲ್ಲ ತಮಗಾದ ಕೆಟ್ಟ ಅನುಭವಗಳ ಸರಮಾಲೆಯನ್ನೆ ಬಿಡಿಸಿಡುತ್ತಿದ್ದಾರೆ. ಒಟ್ಟಾರೆ ಮೀಟೂ ಮೂಲಕ ಮಹಿಳಾ ಸಮಾನತೆಯ ಕೂಗು ಕೇಳಿಸುತ್ತಿದೆ.

Leave a Reply