ಶಿಲ್ಲಾಂಗ್: ಇತ್ತೀಗಷ್ಟೇ ಐವರು ಕಾಂಗ್ರೆಸ್ ಶಾಸಕರು ಸೇರಿದಂತೆ ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಪುನಃ
2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೆಘಾಲಯದಲ್ಲಿ ಪಕ್ಷಾಂತರ ಪ್ರಕ್ರಿಯೆ ಶುರುವಾಗಿದೆ.

ಕಾಂಗ್ರೆಸ್ ಶಾಸಕ ಸೇರಿ ಮತ್ತೆ ನಾಲ್ವರು ಶಾಸಕರು ಮಂಗಳವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಅಲೆಕ್ಸಾಂಡರ್ ಹೆಕ್, ಎನ್ ಸಿಪಿ ಶಾಸಕ ಸನ್ಬೊರ್ ಶುಲೈ ಮತ್ತು ಇಬ್ಬರು ಪಕ್ಷೇತರ ಶಾಸಕರಾದ ಜಸ್ಟಿನ್ ದಖರ್ ಹಾಗೂ ರೊಬಿನಸ್ ಸಿಂಕಾನ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ.

‘ನಾವು ಮಂಗಳವಾರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇವೆ ಮತ್ತು ನಂತರ ಗಾಲ್ಫ್ ಲಿಂಕ್ಸ್ ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಸೇರುತ್ತೇವೆ’ ಎಂದು ಹೆಕ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಸಾಧನೆಗಳನ್ನು ನೋಡಿ ಈ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಿಬುನ್ ಲಿಂಗ್ಡೊ ಅವರು ಹೇಳಿದ್ದಾರೆ.

Leave a Reply