ಹೆಣ್ಣೊಬ್ಬಳು ಪ್ರಾಯಕ್ಕೆ ಬಂದಾಗ ಋತುಮತಿ ಆಗುವುದು ಸಹಜ ಕ್ರಿಯೆ. ಈ ಕ್ರಿಯೆಯಲ್ಲಿ ತಡವಾದಾಗ ಸ್ವಾಭಾವಿಕ ವಾಗಿ ತಾಯಂದಿರಿಗೆ ತಲೆಬಿಸಿ ಉಂಟಾಗುತ್ತದೆ. ಮಗಳು ಋತುಮತಿಯಾದಾಗ ತಮ್ಮ ಮಗಳು ಆರೋಗ್ಯ ಪ್ರಕೃತಿ ನಿಯಮದಂತಿದೆ ಎಂಬ ನೆಮ್ಮದಿ ಮಾತಾಪಿತರಿಗೆ. ಇದು ಒಂದು ಹೆಣ್ಣಿನ ಜೀವನದ ಬಹು ಮಹತ್ವದ ಬದಲಾವಣೆ.
ಋತುಸ್ರಾವ ಮೂಲ ಸ್ಥಳ ಓರ್ವ ಹೆಣ್ಣಿನ ಗರ್ಭಾಶಯ. ಗರ್ಭಾಶಯ ಮಹಿಳೆಯ ದೇಹದ ಪ್ರಮುಖ ಅಂಗ. ಇದು ಪ್ರತಿ ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಹಿಳೆಯ ಆರೋಗ್ಯ ಸದಾ ಒಂದೇ ಪ್ರಕಾರ ಇರುವುದಿಲ್ಲ. ಕೆಲವೊಮ್ಮೆ ಆಕೆಯ ಗರ್ಭಾಶಯದಲ್ಲಿ ತೊಂದರೆ ಉಂಟಾಗುತ್ತದೆ. ಅತಿಯಾದ ರಕ್ತಸ್ರಾವ, ಸೊಂಟ ನೋವು, ವಿಪರೀತ ಬಳಲಿಕೆಗಳಂತಹ ಅನೇಕ ತೊಂದರೆಗೆ ತುತ್ತಾಗುತ್ತಾಳೆ. ಪ್ರತಿ ತಿಂಗಳು ನಿಯಮಿತವಾಗಿ ತಿಂಗಳಿಗೊಮ್ಮೆಯಂತೆ ದೇವರ ಕೃಪೆಯಂತೆ ಋತುಸ್ರಾವವಾಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಇಂತಹ ಪರಿಸ್ಥಿತಿ ಉಂಟಾದಾಗ ಅಥವಾ ಗರ್ಭಾಶಯ ಮತ್ತು ಅದಕ್ಕೆ ಸಂಬಂಧಪಟ್ಟ ಅಂಗಗಳಾದ ಅಂಡಾಶಯ, ಗರ್ಭ ಕೊರಳಿನ ಕ್ಯಾನ್ಸರ್ ದೃಢಪಟ್ಟಾಗ, ಗರ್ಭಾಶಯ ಜಾರಿದಾಗ, ಗಡ್ಡೆಗಳಿದ್ದಾಗ, ಮಗುವಿನ ಜನನದ ನಂತರ ಅತಿಯಾದ ರಕ್ತಸ್ರಾವವುಂಟಾದಾಗ, ಯಾವುದೇ ಚಿಕಿತ್ಸೆ ಫಲಕಾರಿಯಾಗದಾಗ, ದೀರ್ಘಕಾಲ ಕಿಬ್ಬೊಟ್ಟೆಯಲ್ಲಿ ನೋವು, ಇಂತಹ ಹಲವು ಕಾರಣಗಳಿದ್ದಾಗ ವೈದ್ಯರು ಹಿಸ್ಟರಕ್ಟಮಿ ಎಂದರೆ ಗರ್ಭಾಶಯ ತೆಗೆಯುವ ಸೂಚನೆ ನೀಡುತ್ತಾರೆ.
ಆದರೆ ಇಂತಹ ಸಮಯದಲ್ಲಿ ಕೆಲ ವೊಂದು ಪ್ರಶ್ನೆಗಳು ನಮ್ಮಲ್ಲಿ ಉಂಟಾಗು ತ್ತದೆ. ಅದೇನೆಂದರೆ ಇಂತಹ ತೊಂದರೆ ಗಳು ಬಂದಾಗ ಗರ್ಭಕೋಶ ತೆಗೆಸುವುದೊಂದೇ ಪರಿಹಾರವೇ? ಗರ್ಭಕೋಶ ತೆಗೆಸಿದ ನಂತರ ತೊಂದರೆಗಳಿಲ್ಲದೇ ನಿರಾಳವಾಗಿ ಬದುಕಬಹುದೇ? ವೈದ್ಯರಲ್ಲಿ ಇದಕ್ಕೆ ಉತ್ತರ ಇದೆ.
ಕೆಲವು ಸ್ತ್ರೀಯರಿಗೆ ಋತುಸ್ರಾವದಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೂ ಋತು ಸ್ರಾವವೆಂಬ ಹಿಂಸೆಯಿಂದ ಕೊನೆಗಾಣಲು ಗರ್ಭಾಶಯ ತೆಗೆಸಿಕೊಳ್ಳುತ್ತಾರೆ. ಆರಾಮ ವಾಗಿ ಓಡಾಡಿಕೊಂಡಿರಲು ಇದು ಸಹ ಕರಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಇಲ್ಲಿ ಕಷ್ಟಗಳಿಂದ ಮುಕ್ತಿ ದೊರಕಿ ನಿರಾಳವಾಗಿ ಬದುಕಬಹುದು ಎಂದು ಅವರ ಬಯಕೆ. ಆದರೆ ವೈದ್ಯಲೋಕ ಇದನ್ನು ಒಪ್ಪುವುದಿಲ್ಲ.
ಗರ್ಭಕೋಶ ಹೆಣ್ಣಿನ ಕಿಬ್ಬೊಟ್ಟೆಯ ಆಳದಲ್ಲಿ ಹುದುಗಿರುವ ಅರವತ್ತು ಗ್ರಾಂ ತೂಕದ ಸಣ್ಣ ಅಂಗ. ಕಿಬ್ಬೊಟ್ಟೆಯ ಒಳಗೆ ಹುದುಗಿರುವ ಈ ಅಂಗ ಹೊರ ಗಡೆಗೆ ಯೋನಿಯ ಮೂಲಕ ತೆಗೆದು ಕೊಂಡು ಒಳಗೆ ಎಡ ಮತ್ತು ಬಲಗಡೆ ಗಳಲ್ಲಿ ಗರ್ಭಾಶಯದ ಮೂಲಕ ಅಂಡಾ ಶಯಗಳಿಗೆ ಅಂಟಿಕೊಂಡಿರುತ್ತದೆ.
ಋತುಮತಿಯಾದ ಪ್ರತಿ ಹೆಣ್ಣಿನಲ್ಲಿ ಪ್ರತಿ ತಿಂಗಳು ಋತುಸ್ರಾವವಾಗಲು ಈ ಗರ್ಭಾಶಯ ನೆರವಾಗುತ್ತದೆ ಮತ್ತು ಆಕೆ ಗರ್ಭಿಣಿಯಾಗಲು ಇದು ಮುಖ್ಯ ಅಂಗ. ಇದಲ್ಲದೆ ಕಿಬ್ಬೊಟ್ಟೆಯಲ್ಲಿರುವ ಗರ್ಭಾಶಯ ತನ್ನ ಮುಂದಿರುವ ಮೂತ್ರಕೋಶ ಮತ್ತು ಹಿಂದಿರುವ ಗುದನಾಳಕ್ಕೆ ಆಧಾರವಾಗಿ ಅವುಗಳ ಕಾರ್ಯಕ್ಷಮತೆಯಲ್ಲಿ ಸಹಾಯ ಮಾಡುತ್ತದೆ. ಅದರ ಸುತ್ತಲಿರುವ ಹಲ ವಾರು ಅಸ್ತಿಬಂಧಗಳ ಸಹಾಯದಿಂದ ಕಿಬ್ಬೊಟ್ಟೆಯ ಕೆಳಕ್ಕೆ ಬಲ ನೀಡುವಲ್ಲಿಯೂ ಗರ್ಭಾಶಯ ಮುಖ್ಯ ಪಾತ್ರವಹಿಸುತ್ತದೆ.
ಒಂದು ಕಡೆ ಆಧುನಿಕತೆಗೆ ಒಗ್ಗಿ ಕೊಂಡು ಆಧುನಿಕ ಜೀವನ ಶೈಲಿಯನ್ನು ಇಷ್ಟ ಪಡುವ ಮಹಿಳೆಯರು ಮುಟ್ಟಿನ ಕಿರಿಕಿರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ದಿನಚರಿಯಲ್ಲಿ ಯಾವುದೇ ರೀತಿಯ ಏರು ಪೇರಾಗದಂತೆ ನಿರಾಳವಾಗಿ ಜೀವಿಸಲು ಗರ್ಭಾಶಯವನ್ನು ತೆಗೆಯು ವುದು ನಗರ ಪ್ರದೇಶದಲ್ಲಿ ಸಾಮಾನ್ಯ. ಇದರಿಂದ ತಮ್ಮ ಆರೋಗ್ಯ ಹಾಗೂ ಮುಂದಿನ ಜೀವನಕ್ಕೆ ಆಗುವ ತೊಂದರೆ ಯನ್ನು ಅವರು ಗಮನದಲ್ಲಿರಿಸುವುದಿಲ್ಲ. ಆಧುನಿಕ ಜೀವನ ಶೈಲಿಯಾಗಿರುವ ಐiviಟಿg ಖಿogeಣheಡಿನ ಪ್ರಭಾವಕ್ಕೆ ತುತ್ತಾಗಿ ರುವ ಯುವತಿಯರು ತಮ್ಮ ಎಂಜಾಯ್ ಮೆಂಟ್ಗೆ ಅಡಚಣೆಯಾಗದಂತೆ ಗರ್ಭ ವನ್ನು ತಡೆಯಲು ಗರ್ಭಾಶಯವನ್ನು ತೆಗೆದು ಬಿಡುತ್ತಾರೆ. ಇದು ನಾಗರಿಕ ಮಹಿಳೆಯರ ಆಧುನಿಕ ಜೀವನ ಶೈಲಿ.
ಆದರೆ, ಕೆಲವು ಸ್ತ್ರೀಯರಿಗೆ ಗರ್ಭಾ ಶಯದ ತೊಂದರೆ, ಋತುಸ್ರಾವದ ತೊಂದರೆ, ಆಧುನಿಕ ಜೀವನ ಶೈಲಿಯ ಆಸೆ, ಯಾವುದೂ ಇಲ್ಲದಿದ್ದರೂ ಮೂಢ ನಂಬಿಕೆಯ ಕರಾಳತೆಗೆ ತುತ್ತಾಗಿ ಗರ್ಭಾ ಶಯವನ್ನು ಬಲವಂತವಾಗಿ ತೆಗೆಯಬೇಕಾ ದಂತಹ ಅನಿವಾರ್ಯತೆಗೆ ತುತ್ತಾಗಿರುವುದು ಖೇದಕರ ಹಾಗೂ ಆಶ್ಚರ್ಯ ಕೂಡ.
ನಾಗರಿಕತೆ ಎಷ್ಟೇ ಮುಂದುವರಿದರೂ ಮಹಿಳೆಯರ ಮೇಲಿನ ಶೋಷಣೆ ಕಡಿಮೆ ಆಗುವುದಿಲ್ಲ ಎಂದು ಅಕ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ `ಗೊಲ್ಲದ ಹಟ್ಟಿ ಯಲ್ಲಿ’ ನಡೆಯುತ್ತಿರುವ ಘಟನೆಗಳಿಂದ ತಿಳಿದುಕೊಳ್ಳಬಹುದು.
ಮಾಸಿಕ ಋತುಸ್ರಾವದ ವೇಳೆ ಮಹಿಳೆ ಯರು ತಮ್ಮ ಮನೆ ಅಥವಾ ಗ್ರಾಮದಿಂದ ಹೊರ ಇರಬೇಕಾದ ಅನಿವಾರ್ಯ ಸ್ಥಿತಿ ಹಿಂದಿನಿಂದಲೂ ಬೆಳೆದು ಬಂದಂತಹ ಒಂದು ಅನಿಷ್ಟ ಪದ್ಧತಿ. ಈ ಗ್ರಾಮದಲ್ಲಿ ಮಾಸಿಕ ಋತುಚಕ್ರ ಸಂಭವಿಸಿದ ಸಂದರ್ಭ ದಲ್ಲಿ ಮಹಿಳೆಯರನ್ನು ಗ್ರಾಮದ ಹೊರಗಿರುವ “ಸೂತಕದ ಮನೆಯಲ್ಲಿ” ಇರಲು ಸರಕಾರ ಒಂದು ಮನೆ ನಿರ್ಮಿಸಿ ಕೊಟ್ಟಿದೆ. ಈ ಮನೆಯಲ್ಲಿ ಗಾಳಿ, ಬೆಳಕು, ಶೌಚಾಲಯ, ನೀರಿನ ವ್ಯವಸ್ಥೆ ಯಾವುದೂ ಇಲ್ಲ. ಸ್ವಚ್ಛ ಪರಿಸರವೂ ಇಲ್ಲ. ಇಲ್ಲಿ ವಾಸಿಸುವುದು ಅಸಾಧ್ಯ. ಜನರನ್ನು ಇಂತಹ ಅನಿಷ್ಟ ಮೂಢನಂಬಿಕೆ ಹಾಗೂ ಪದ್ಧತಿಯಿಂದ ಹೊರ ತರಲು ಪ್ರಯತ್ನಿಸಬೇಕಾದುದು ಸರ ಕಾರದ ಕೆಲಸ. ಆದರೆ ಸರಕಾರ ಮಹಿಳೆಯ ಸಹಜ ಪ್ರಕ್ರಿಯೆಯನ್ನು “ಸೂತಕ” ಎಂದು ಕರೆಯುವುದು ಕಾನೂನು ಬಾಹಿರ. ಇಂತಹ ಮೂಢನಂಬಿಕೆಯಿಂದ ಜನರನ್ನು ಹೊರ ತರುವ ಬದಲು ಸರಕಾರ “ಸೂತಕದ ಮನೆ”ಯನ್ನು ಕಟ್ಟಿ ಸ್ತ್ರೀಯರ ಜೀವನ ಇನ್ನೂ ಕಷ್ಟಕರವಾಗಿ ಮಾಡಿದೆ.
ಆ ಗ್ರಾಮದ ಸ್ತ್ರೀಯರು, ವಿದ್ಯಾವಂತ, ಸ್ತ್ರೀಯರು ಕೂಡ ತಮ್ಮನ್ನು ಇಂತಹ ಹೀನಾಯ ಪರಿಸ್ಥಿತಿಯಿಂದ ತಡೆಯಲು, 30 ವರ್ಷ ದಾಟಿದ ತಕ್ಷಣ ಚಿಕಿತ್ಸೆಯ ಮೂಲಕ ಗರ್ಭಾಶಯವನ್ನು ತೆಗೆಯು ತ್ತಿದ್ದಾರೆ! ಚಿಕ್ಕ ಪ್ರಾಯದಲ್ಲಿ ಇಂತಹ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿ ತಾವು ನಿರಾಳವಾಗಿ ಬದುಕಬೇಕೆಂಬ ಹಂಬಲದಿಂದ ತೆಗೆದ ಹೆಜ್ಜೆ, ನಿಜವಾಗಲೂ ಸ್ತ್ರೀಯ ಪಾಲಿಗೆ ಸುಖ, ನೆಮ್ಮದಿ ಹಾಗೂ ಆರೋಗ್ಯಕರ ವಿಚಾರವೇ? ಈ ಮೂಢನಂಬಿಕೆಯ ಬಗ್ಗೆ ಶಾಸಕರು ಮತ್ತು ಸಂಸದರಲ್ಲೇ ಅರಿವು ಮೂಡಿಸುವ ಅಗತ್ಯವಿದೆ? ಒಂದು ಮೂಢನಂಬಿಕೆಯಿಂದ ಸ್ತ್ರೀಯ ಜೀವನವನ್ನು ನರಕಸದೃಶ ಮಾಡ ಲಾಗುತ್ತಿರುವುದು ಖೇದಕರ.
ಕಾಲ ಕಳೆದಂತೆ ವಯಸ್ಸಾಗಿ, ದೇಹದ ಕಾರ್ಯ ಕ್ಷಮತೆ ತಗ್ಗಿದಾಗ ಕಿಬ್ಬೊಟ್ಟೆಯ ತಳ ಮತ್ತು ಅಂಗಗಳಿಗೆ ಆಧಾರವಾದ ಪ್ರಮುಖ ಅಂಗ ಇಲ್ಲದಾಗ ಹಲವು ತೊಂದರೆಗಳಿಂದ ನರಳಬೇಕಾದ ಸಂದರ್ಭ ಬರುತ್ತದೆ. ಮೂತ್ರದ ಅಸಂಯತೆ, ಗುದ ನಾಳ ಮತ್ತು ಗುದದ್ವಾರದ ಅಸಂಯಮತೆ, ಕಿಬ್ಬೊಟ್ಟೆಯ ನೆಲ ಅಂಗ ಜಾರುವಿಕೆ ಮತ್ತು ಕುರುವಿನ ಸಮಸ್ಯೆಗಳಿಂದ ಬಳಲು ತ್ತಾರೆ. ಇತ್ತೀಚೆಗೆ ಇಂತಹ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ನಲವತ್ತೈದು ವರ್ಷಕ್ಕಿಂತ ಹಿರಿಯ ವಯಸ್ಸಿಗೆ ಗರ್ಭಾಶಯ ತೆಗೆಸಿದ ಸ್ತ್ರೀಯ ರಲ್ಲಿ ಮೂತ್ರಪಿಂಡ ಕ್ಯಾನ್ಸರ್ ಆಗುವ ಸಂಭವ ಅಧಿಕವಾಗಿದೆ ಎಂದು ಸಂಶೋಧನೆ ಹೇಳು ತ್ತದೆ. ಮಹಿಳೆಯ ದೇಹಕ್ಕೆ ಅಗತ್ಯವಿರುವ ಕಬ್ಬಿಣ ಮತ್ತು ಹಾರ್ಮೋನ್ಗಳಲ್ಲಿ ಏರು ಪೇರಾಗಿ ಕ್ಯಾನ್ಸರ್ ಬರುವ ಸಂಭವ ಇದೆ. ಕೆಲವೊಮ್ಮೆ ಹಿಸ್ಟರೆಕ್ಟಮಿಯ ವೇಳೆ ಅಂಡಾಶಯವನ್ನು ತೆಗೆದು ಹಾಕುವು ದರಿಂದ ಅಂಡಾಶಯದ ಹಾರ್ಮೋನ್ ಗಳಾದ ಕೂಸ್ಟ್ರೋಜನ್ ಮತ್ತು ಪ್ರೆÇಜಿಸ್ಟ ರಾನ್ನ ರಕ್ಷಣೆಯಲ್ಲಿ ವಂಚಿತರಾಗಬಹುದು. ಹಾರ್ಮೋನ್ಗಳು ಸ್ತ್ರೀಯರ ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.
ನಗರ ಪ್ರದೇಶದಲ್ಲಿ ಬದುಕುತ್ತಿರುವ ಸ್ತ್ರೀಯರಿಗೆ ಇಂತಹ ಪರಿಸ್ಥಿತಿಯಿಂದ ಒಂದು ಹಂತಕ್ಕೆ ಎಚ್ಚರಿಸಬಹುದು. ಆದರೆ ಗ್ರಾಮ, ಹಳ್ಳಿಗಳಲ್ಲಿ ಉತ್ತಮ ಆರೋಗ್ಯಕ್ಕಿಂತ ಅನಿಷ್ಟ ಪದ್ಧತಿಗೆ ತುತ್ತಾಗಿ ಚಿಕ್ಕ ಪ್ರಾಯದಲ್ಲೇ ತಮ್ಮ ಗರ್ಭಾಶಯವನ್ನು ತೆಗೆದು ಬಿಡುವಂತಹ ಹಂತಕ್ಕೆ ಮುಂದಾಗುವ ಮಹಿಳೆಯರನ್ನು ರಕ್ಷಿಸುವುದು ಹೇಗೆ? ಅವರ ಸಾಮುದಾಯಿಕ ಪದ್ಧತಿ, ಅವರ ನಂಬಿಕೆ, ಅದರಲ್ಲಿ ಅವರ ಮೇಲೆ ಈ ಕಾರಣಕ್ಕೆ ಆಗುವ ಶೋಷಣೆ ಯಿಂದ ಸ್ತ್ರೀಯರನ್ನು ರಕ್ಷಿಸಲು ಸಾಧ್ಯ ವಿದೆಯೆ? ಸರಕಾರ ಮತ್ತು ಮಹಿಳಾ ಆಯೋಗಗಳು ಇನ್ನಾದರೂ ಎಚ್ಚೆತ್ತು ಕೊಳ್ಳಲಿ. ಇಂತಹ ಪ್ರದೇಶಗಳಿಗೆ ಎನ್ಜಿಓ ಗಳನ್ನು ಕಳುಹಿಸಿ ಸ್ತ್ರೀಯರಲ್ಲಿ ಅದರ ಭೀಕರತೆಯ ಬಗ್ಗೆ ಜ್ಞಾನ ಮೂಡಿಸುವ ಕೆಲಸ ಮಾಡಲಿ. ಸ್ತ್ರೀಯ ಜೀವನ ಬಹಳ ಮಹತ್ವ ವುಳ್ಳದ್ದು. ಅವರು ಅನಾರೋಗ್ಯಕ್ಕೆ ತುತ್ತಾದರೆ, ಅವರನ್ನು ಅವರ ಕುಟುಂಬ, ಮಕ್ಕಳನ್ನು ನೋಡಿಕೊಳ್ಳಲು ಯಾವ ಮೂಢ ಪದ್ಧ ತಿಯು ಮುಂದುವರಿಯುವುದಿಲ್ಲ. ಆರೋಗ್ಯ ಕರವಾಗಿ ಬಾಳಬೇಕೆಂದು ಹತ್ತು ಹಲವಾರು ರೀತಿಯ ಆರೋಗ್ಯಕರ ಆಹಾರ ಸೇವಿಸಲು ಹೇಳಲಾಗುತ್ತದೆ. ಆದರೆ ಇನ್ನೊಂದು ಕಡೆ ಅವರ ಜೀವನವನ್ನು ಕರಾಳಕೂಪಕ್ಕೆ ತಳ್ಳಲಾಗುತ್ತಿದೆ!
ಎಸ್. ಹೆಚ್. ಕುಲಶೇಖರ