ಸಾಂದರ್ಭಿಕ ಚಿತ್ರ

ಮನಸ್ಸು ಅದೆಷ್ಟು ಸೂಕ್ಷ್ಮ. ಪ್ರತಿಕ್ಷಣದ ಅದರ ಗ್ರಹಿಕೆ, ಚಿಂತನೆ, ಸ್ವತಃ ಅದಕ್ಕೂ ನಿಲುಕದ ಪರಿವರ್ತನೆ-ಪಲ್ಲಟ ಎಲ್ಲವೂ ಅದ್ಭುತ. ಮನಸ್ಸಿನ ಕ್ಷಣಮಾತ್ರದ ತಲ್ಲಣ ವೊಂದು ನಿರೀಕ್ಷೆಯನ್ನೂ ಮೀರಿದ ಅಚ್ಚರಿ ಸೃಷ್ಟಿಸಬಹುದು. ಇಡೀ ಬದುಕನ್ನೇ ಕಸಿದು ಕೊಳ್ಳಬಹುದು. ಅಷ್ಟರವರೆಗೆ ಕನಸಿನಲ್ಲೂ ಕನವರಿಸದ ಸಂದರ್ಭಕ್ಕೆ ಸಾಕ್ಷಿಯಾಗ ಬಹುದು. ಅರ್ಥಾತ್, ‘ಆತ್ಮ’ದ ‘ಹತ್ಯೆ’ಗೂ ಕಾರಣವಾಗಬಹುದು. ಹೌದು, ಮನಸ್ಸನ್ನು ಅರಿಯುವುದು ಅಷ್ಟು ಸುಲಭವಲ್ಲ. ವೈದ್ಯಕೀಯ ಕ್ಷೇತ್ರಕ್ಕೂ ಅದು ಸವಾಲು. ಈ ನಿಟ್ಟಿನಲ್ಲಿ ವೈದ್ಯ ವಿಜ್ಞಾನ ಬಹಳಷ್ಟು ಮುಂದುವರಿದಿದ್ದರೂ ಅಲ್ಲಿನ ನಿಗೂಢತೆ ಗಳು ಇನ್ನೂ ಕಗ್ಗಂಟು.

ಬದಲಾಗುವ ಸಂದರ್ಭ, ವಯೋ ಮಾನಕ್ಕೆ ಹೊಂದಿಕೊಂಡು ವ್ಯಕ್ತಿಗತ ವಿಷಯಗಳು ಬದಲಾಗುತ್ತದೆ. ನಿರೀಕ್ಷೆ, ಕನಸು ಸಾಕಾರಗೊಳ್ಳದಿದ್ದರೆ ಮನಸ್ಸು ಪಲ್ಲಟಗೊಳ್ಳುತ್ತದೆ, ತಲ್ಲಣಗೊಳ್ಳುತ್ತದೆ. ಯಾವ ಕ್ಷಣದಲ್ಲಿ ಏನು ಸಂಭವಿಸುತ್ತದೆ ಎಂದು ಆ ಕ್ಷಣಕ್ಕೆ ಯಾರಿಂದಲೂ ಹೇಳಲು ಸಾಧ್ಯವಾಗದ ಬೆಳವಣಿಗೆ ಸಂಭವಿಸುತ್ತದೆ.

ಮನಸ್ಸು ಚಂಚಲ, ವ್ಯಕ್ತಿತ್ವವನ್ನು ಅವಲಂಬಿಸಿ ಅದರ ಚಲನವಲನ ಬದ ಲಾಗುತ್ತದೆ. ಸಿಟ್ಟು, ಸಿಡುಕು, ಆಘಾತ, ಖಿನ್ನತೆ, ನೋವು, ಅಳು, ನಗು, ಸಂತಸ, ಸಂಭ್ರಮ ಹೀಗೆ ಮನಸ್ಸು ಪರಿವರ್ತನೆಗಳಿಗೆ ತೆರೆದುಕೊಳ್ಳುತ್ತಲೇ ವ್ಯಕ್ತಿಯ ನಡವಳಿಕೆ, ಆತನ ಚಟುವಟಿಕೆಗಳ ಮೇಲೂ ಪರಿ ಣಾಮ ಬೀರುತ್ತದೆ. ಅದರ ಫಲ ಕೆಲವೊಮ್ಮೆ ತಕ್ಷಣ ಕಾಣಿಸಿಕೊಂಡರೆ ಕೆಲವು ಸಂದರ್ಭದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಹೆತ್ತವರು ಮೊಬೈಲ್ ಖರೀದಿಸಿ ಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರ ಣಾದರೆ, ಕೈ ತುಂಬಾ ಹಣ, ಐಷಾರಾಮಿ ಜೀವನ ನಡೆಸುತ್ತಿದ್ದರೂ ಆತ್ಮಹತ್ಯೆಗೆ ಮುಂದಾದ ಮೋಡೆಲ್, ಕೈ ಸಾಲ ತೀರಿಸಲು ಸಾಧ್ಯವಾಗದ ಕಾರಣಕ್ಕೆ ಸಮಾಜದ ಮುಂದೆ ತಲೆ ಎತ್ತಿ ನಡೆಯಲು ಸಾಧ್ಯವಾಗದೆ ನೇಣಿಗೆ ಶರಣಾದ ಉದ್ಯಮಿ… ಇಂತಹ ಹಲವಾರು ಘಟನೆಗಳು ಕಣ್ಣಮುಂದೆ ನಡೆಯುತ್ತಿದ್ದರೂ ನಾವು ಮೂಕ ಪ್ರೇಕ್ಷಕರಾಗಿರಬೇಕಾದ ಸಂದರ್ಭಗಳೇ ಹೆಚ್ಚು.

ತಕ್ಷಣಕ್ಕೆ ಕಾಣಿಸಿಕೊಳ್ಳುವ ಖಿನ್ನತೆ ಇಂತಹ ಸಂದರ್ಭಗಳಿಗೆ ಕಾರಣವಾಗ ಬಹುದು ಅಥವಾ ಕೆಲವೇ ದಿನಗಳ ಮದ್ಯ, ಸಿಗರೇಟು ಸೇವನೆ ಮತ್ತಿತರ ಚಟ, ಗಾಢ ಚಿಂತನೆ ಬಳಿಕ ಮನಸ್ಸು ತೀವ್ರ ತರಹದ ಬದಲಾವಣೆಗಳಿಗೆ ಒಗ್ಗಿ ಕೊಳ್ಳಬಹುದು. ಮಾನಸಿಕ ಖಿನ್ನತೆ ಆವರಿಸಿ ಕೊಂಡ ಕ್ಷಣದಿಂದ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾಗುವುದು. ಒಂಟಿತನವನ್ನು ಬಯಸುವವನು ವಿದ್ಯಾರ್ಥಿಯಾದರೆ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು… ಹೀಗೆ ವ್ಯಕ್ತಿಗಳ ಚಲನವಲನ ಸೂಕ್ಷ್ಮವಾಗಿ ಗಮನಿಸಿದರೆ ಉಂಟಾಗುವ ಬದಲಾವಣೆ ಗಳನ್ನು ಅರಿಯಬಹುದು.

ಖಿನ್ನತೆಯ ಲಕ್ಷಣಗಳು:

* ಯಾವಾಗಲೂ ಮನಸ್ಸಿಗೆ ಬೇಜಾರು, ಸಂತೋಷವೇ ಇಲ್ಲ ಎಂಬ ಅನಿಸಿಕೆ, ನಿಶ್ಯಕ್ತರಾದ ಭಾವನೆ, ಸಣ್ಣ-ಪುಟ್ಟ ಕೆಲಸ ಮಾಡುವಾಗ ಸುಸ್ತು ಅನಿಸುವುದು, ಯಾವುದೇ ವಿಷಯದಲ್ಲಿ ಆಸಕ್ತಿ ಇಲ್ಲದಿರುವಿಕೆ, ಗೆಳೆಯರನ್ನು ಭೇಟಿ ಯಾಗಲು, ಹೊರಗಡೆ ತಿರುಗಾಡಲು, ಆಟವಾಡಲು ಹೋಗದಿರುವುದು, ಲೈಂಗಿಕ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದು ಕೊಳ್ಳುವುದು, ಪದೇ ಪದೇ ಹೆದರಿಕೆ, ಸಮಾರಂಭಗಳಿಗೆ ಹೋಗಲು ಭಯ, ಚಿಂತೆ…

* ಗಮನಶಕ್ತಿ ಕಡಿಮೆಯಾಗಿ, ಮರೆತು ಹೋಗುವುದು, ಸಣ್ಣ-ಪುಟ್ಟ ವಿಚಾರಗಳು ನೆನಪಿಗೆ ಬಾರದಿರುವುದು, ಆತ್ಮವಿಶ್ವಾಸ ಕಳೆದುಕೊಳ್ಳುವುದು.

* ಮನಸ್ಸಿಗೆ ಯಾವಾಗಲೂ ಕಿರಿಕಿರಿ, ಸಣ್ಣ-ಪುಟ್ಟ ವಿಚಾರಗಳಿಗೆ ಪದೇ ಪದೇ ಸಿಟ್ಟು ಬರುವುದು, ಮನೆಯವರನ್ನು ಅಥವಾ ಕಛೇರಿಯವರನ್ನು ಎಲ್ಲರನ್ನೂ ರೇಗಿಸಿ ಮಾತನಾಡುವುದು.

* ನಾನು ವ್ಯರ್ಥ, ‘ಪ್ರಯೋಜನ ವಿಲ್ಲದವ’, ಎಲ್ಲರಿಗೂ ಹೊರೆಯಾಗಿದ್ದೇನೆ, ಭಾರವಾಗಿದ್ದೇನೆ, ಮುಂದಿನ ಭವಿಷ್ಯವಿಲ್ಲ, ‘ನನ್ನಿಂದ ಏನೂ ಮಾಡಲಿಕ್ಕಾಗುವುದಿಲ್ಲ’, ನಾನು ಬೇರೆಯವರಿಗಿಂತ ತೀರ ಕೆಳಮಟ್ಟ ದಲ್ಲಿದ್ದೇನೆ, ‘ಬದುಕೇ ಶೂನ್ಯ’, ‘ನನ್ನನ್ನು ಯಾರೂ ಪ್ರೀತಿಸುವುದಿಲ್ಲ…’ ಇಂತಹ ಆಲೋಚನೆಗಳು ಪದೇ ಪದೇ ಬಂದು ಮನಸ್ಸನ್ನು ಕಸಿವಿಸಿಗೊಳಿಸುತ್ತಾ ಇರುತ್ತದೆ. ಭಾವನೆಗಳನ್ನು ಸಂದರ್ಭಕ್ಕೆ ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದಿರುವುದು, ಅಳುವುದು, ನಿದ್ದೆ ಕಡಿಮೆಯಾಗುವುದು, ನಿದ್ದೆ ಬಂದರೂ 2-3 ಗಂಟೆಗೆ ಎಚ್ಚರವಾಗಿ ಮುಂಜಾನೆಯ ವರೆಗೆ ನಿದ್ದೆ ಬಾರದಿರು ವುದು, ತಲೆನೋವು, ಮೈಕೈ ಸೆಳೆತ, ಜೀರ್ಣಶಕ್ತಿ ಕಡಿಮೆಯಾಗುವುದು, ತೂಕ ಕಳೆದುಕೊಳ್ಳುವುದು, ಮುಂಜಾನೆ ಕೆಲಸಕ್ಕೆ ಹೋಗಲು ನಿರಾಸಕ್ತಿ, ನಿರ್ಧಾರ ತೆಗೆದು ಕೊಳ್ಳಲು ಚಡಪಡಿಸುವುದು, ನಿತ್ಯದ ಕೆಲಸ ಮುಗಿಯದೆ ತೊಂದರೆಯಾಗು ವುದು, ತಪ್ಪು ಮಾಡಿರಬಹುದೆಂಬ ಭಾವನೆ ಅಥವಾ ಶಿಕ್ಷೆ ಅನುಭವಿಸುತ್ತಿದ್ದೇನೆ ಎಂಬ ಕಲ್ಪನೆ, ಜೀವನವೇ ಬೇಡ, ಆತ್ಮಹತ್ಯೆಯ ಆಲೋಚನೆಗಳು.

ಖಿನ್ನತೆಯ ಜೊತೆ ಬೇರೆ ಬೇರೆ ಖಾಯಿಲೆಗಳು:

– ಫೋಭಿಯಾ – ಹೆದರಿಕೆ, ಭಯ ಹೆಚ್ಚಾಗುವುದು.
– ಕಾಯಿಲೆ ಬರಬಹುದೆಂಬ ಸಂಶಯ.
– ಜನರ ಮೇಲೆ, ಪತಿ/ಪತ್ನಿಯ ಮೇಲೆ ಸಂಶಯ ಹುಟ್ಟುವುದು.
– ಯಾರೋ ಕೊಲ್ಲಲಿಕ್ಕೆ ಬರುತ್ತಾರೆ, ಮಾಟ ಮಂತ್ರ ಮಾಡುತ್ತಿದ್ದಾರೆಂಬ ಸಂಶಯ.
– ಗೀಳುರೋಗ- ಮಾಡಿದ ಕೆಲಸ ವನ್ನು ಪದೇ ಪದೇ ಮಾಡುತ್ತಲೇ ಇರುವುದು.
– ಮದ್ಯಪಾನ ಚಟಕ್ಕೆ ಒಳಗಾಗಿ, ಲಿವರ್ ಮತ್ತು ನರಗಳು ದೌರ್ಬಲ್ಯ ಗೊಳ್ಳುವುದು.
– ಡಯಾಬಿಟೀಸ್ ಮತ್ತು ರಕ್ತದೊತ್ತಡ ಕಾಯಿಲೆಗಳು ಜಾಸ್ತಿಯಾಗುವುದು.
– ಆಹಾರ ಸೇವನೆ ಅಸ್ವಸ್ಥತೆಯಾಗಿ ಕೊಬ್ಬಿನಾಂಶ ಜಾಸ್ತಿಯಾಗುವುದು.

ಕಾರಣಗಳು

* ನರಗಳಲ್ಲಿ ರಾಸಾಯನಿಕ ಅಸಮ ತೋಲನದಿಂದಾಗಿ ಖಿನ್ನತೆ ಕಾಯಿಲೆಗೆ ಕಾರಣವಾಗಬಹುದು. ಸೆರಟೋನಿನ್, ನಾರೆಎಪಿನೆಪ್ರೀನ್, ಸೊಪಮಿನ್‍ನಂತಹ ರಾಸಾಯನಿಕ ಪದಾರ್ಥಗಳ ಕೊರತೆ ಯಿಂದಾಗಿ ಮನಸ್ಸು ಪಲ್ಲಟಕ್ಕೆ ಕಾರಣವಾಗುತ್ತದೆ.
* ಆನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚು.
* ಥೈರಾಯಿಡ್ , ನರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪಾರ್ಕಿನ್ಸನ್, ಕ್ಯಾನ್ಸರ್ ಕಾಯಿಲೆಗಳು ಕೂಡಾ ಖಿನ್ನತೆಗೆ ಎಡೆಮಾಡಿಕೊಡುತ್ತದೆ.
* ಅತಿಯಾದ ಮದ್ಯಪಾನ ಸೇವಿಸುತ್ತಾ ಇದ್ದಲ್ಲಿ ಖಿನ್ನತೆ ಕಾಯಿಲೆ ಬರಬಹುದು.
* ವೈಫಲ್ಯತೆಗಳು.

ಚಿಕಿತ್ಸೆ

* ಆಪ್ತ ಸಮಾಲೋಚನೆ: ನಕಾರಾತ್ಮಕ ಯೋಚನೆಗಳನ್ನು ಸಲಹೆಗಳ ಮೂಲಕ ಸಕಾರಾತ್ಮಕವಾಗಿ ಪರಿವರ್ತಿಸಲು ಪ್ರಯತ್ನಿಸುವುದು, ಜೀವನದಲ್ಲಿ ನಡೆಯುವ ಕಹಿ ಘಟನೆಗಳನ್ನು ಹೇಳಿ ಅದನ್ನು ಮರೆಯಲು ಅಥವಾ ವಿಭಿನ್ನವಾಗಿ ಯೋಚಿಸಲು ಸಹಕರಿಸುವುದು.
* ಕೆಟ್ಟು ಹೋದ ವ್ಯಕ್ತಿಗತ ಸಂಬಂಧಗಳನ್ನು ಪುನಃ ಜೋಡಿಸುವುದು. ತಪ್ಪು ಕಲ್ಪನೆಗಳನ್ನು ಪರಿವರ್ತಿಸುವುದು. ದೈನಂದಿನ ಚಟುವಟಿಕೆಗಳನ್ನು ಸರಿಪಡಿಸಿ ನಿರಂತರ ಕಾರ್ಯಪ್ರವೃತ್ತರಾಗಿಸುವುದು.
* ಸಂಜ್ಞಾತ್ಮಕ ವರ್ತನಾ ಚಿಕಿತ್ಸೆ
* ಸಪೋರ್ಟಿವ್ ಸೈಕೋ ಥೆರಪೀಸ್
* ಯೋಗ, ಧ್ಯಾನ
ಹೀಗೆ ಬದಲಾಗುವ ಮನಸ್ಸುಗಳನ್ನು ಮತ್ತೆ ಹಳಿಗೆ ತರಲು ಅಪ್ತಸಮಾ ಲೋಚನೆಯು ಔಷಧೋಪಚಾರದೊಂದಿಗೆ ಅತ್ಯುತ್ತಮ ಪರಿಹಾರ.

ಔಷಧಿಗಳು:
ಆಂಟಿಡಿಪ್ರೆಸೆಂಟ್ ಮದ್ದುಗಳು ತುಂಬಾ ಪರಿಣಾಮಕಾರಿ. ಆಂಟಿಡಿಪ್ರೆಸೆಂಟ್ ಔಷಧಿ ಗಳು ಮೆದುಳಿನ ರಾಸಾಯನಿಕ ವಸ್ತುಗಳ ಅಸಮತೋಲನೆಯನ್ನು ಸರಿಯಾಗಿಸು ವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಔಷಧಿಗಳನ್ನು ಮನೋರೋಗ ತಜ್ಞರ ಅಭಿಪ್ರಾಯದಂತೆ ತೆಗೆದುಕೊಳ್ಳುವುದು ಉತ್ತಮ. ಹೆಚ್ಚಾಗಿ 6 ತಿಂಗಳಿನಿಂದ – 9 ತಿಂಗಳವರೆಗೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಯನ್ನು ತೆಗೆದುಕೊಂಡಲ್ಲಿ ಖಿನ್ನತೆಯನ್ನು ತಡೆಯಬಹುದು ಹಾಗೂ ಅದರಿಂದ ಉಂಟಾಗುವಂತಹ ಮುಂದಿನ ಪರಿಣಾಮ ಗಳನ್ನು ಕಡಿಮೆ ಮಾಡಬಹುದು.

ಡಾ| ಪಿ.ಕೆ. ಕಿರಣ್ ಕುಮಾರ್
ಅಧಿತ್ ಕಿರಣ್ ನರಮಾನಸಿಕ ಚಿಕಿತ್ಸಾ ಕೇಂದ್ರ

Leave a Reply