ಕರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಮಧ್ಯೆ ವಲಸೆ ಕಾರ್ಮಿಕರ ಬವಣೆ ಹೇಳತೀರದು. ಒಂದೆಡೆ ಲಾಕ್ ಡೌನ್ ಇನ್ನೊಂದೆಡೆ ಪತ್ನಿ ಮಕ್ಕಳ ಜೊತೆಗೆ ತಮ್ಮ ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ. ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಹೊರಟವರಲ್ಲಿ ಸಾವಿಗೀಡಾದವರೂ ಮಕ್ಕಳೂ ಇದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ವಲಸೆ ಕಾರ್ಮಿಕರ ಮತ್ತೊಂದು ಚಿತ್ರವನ್ನು ರೈಲ್ವೆ ಇಲಾಖೆ ಹಂಚಿದ್ದು, ಇದರಲ್ಲಿ ವಲಸೆ ಕಾರ್ಮಿಕರು ರೈಲು ಹತ್ತುವ ಮೊದಲು ಭೂಮಿಗೆ ನಮಸ್ಕರಿಸುತ್ತಿದ್ದಾರೆ.

“ವಲಸೆ ಕಾರ್ಮಿಕರು ಶ್ರಾಮಿಕ್ ವಿಶೇಷ ರೈಲು ಹಿಡಿಯುವ ಮೊದಲು ಭೂಮಿಗೆ ನಮಸ್ಕರಿಸಿ ನಂತರ ಪ್ರಯಾಣವನ್ನು ಪ್ರಾರಂಭಿಸಿ … ಈ ಭಾವನಾತ್ಮಕ ಕ್ಷಣವು ಚಂಡೀಗಢದಿಂದ ಗೊಂಡಾ (ಯುಪಿ) ಗೆ ಪ್ರಯಾಣಿಸುವ ಶ್ರಮಿಕ್ ವಿಶೇಷ ರೈಲಿನದ್ದಾಗಿದೆ” ಎಂದು ರೈಲ್ವೆ ಟ್ವೀಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here