ಉದಯಪುರ: ಗೋಶಾಲೆಯಲ್ಲಿ ಪಶುಗಳ ಆರೈಕೆ ಮಾಡುತ್ತಾ ಅಧ್ಯಯನ ಮಾಡಿದ ಹಾಲು ಮಾರುವವರ ಮಗಳು ಇದೀಗ ಜಡ್ಜ್ ಆಗುತ್ತಿದ್ದಾರೆ. ಸೋನಾಲ್ ಶರ್ಮಾ ಅವರು 2018 ರಲ್ಲಿ ರಾಜಸ್ಥಾನ ನ್ಯಾಯಾಂಗ ಸೇವೆ (ಆರ್‌ಜೆಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ಈಗ ಅವರು ನ್ಯಾಯಾಧೀಶರಾಗಲಿದ್ದಾರೆ. ಮಾತ್ರವಲ್ಲ ಎಲ್ಲಾ ಅಡೆತಡೆಗಳ ನಡುವೆಯೂ ಬಿಎ, ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅವರನ್ನು ರಾಜಸ್ಥಾನದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲಾಗುವುದು. ಪರೀಕ್ಷೆಯ ಫಲಿತಾಂಶವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಲಾಗಿತ್ತು, ಆದರೆ ಸೋನಲ್ ಅವರು ಸಾಮಾನ್ಯ ಕಟ್ ಆಫ್ ಪಟ್ಟಿಯಲ್ಲಿ ಒಂದು ಅಂಕಕ್ಕಿಂತ ಕೆಳಗಿರುವುದರಿಂದ ವೈಟಿಂಗ್ ಲಿಸ್ಟ್ ನಲ್ಲಿದ್ದರು.

sonal sharma

ಆದಾಗ್ಯೂ, ಆಯ್ದ ಕೆಲವು ಅಭ್ಯರ್ಥಿಗಳು ಸೇವೆಗೆ ಸೇರದಿದ್ದಾಗ ಅವರಿಗೆ ಅದೃಷ್ಟ ಒಲಿಯಿತು. ಹಣಕಾಸಿನ ತೊಂದರೆಯಿಂದಾಗಿ, ಸೋನಾಲ್ ಅವರಿಗೆ ಬೋಧನಾ ಪೂರಕ ವಾತಾವರಣ ಅಥವಾ ದುಬಾರಿ ಅಧ್ಯಯನ ಸಾಮಗ್ರಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ತನ್ನ ಸೈಕಲ್‌ನೊಂದಿಗೆ ಕಾಲೇಜಿಗೆ ಹೋಗುತ್ತಿದ್ದಳು. ತನ್ನ ಹಸುಗಳ ಒಂದು ಮೂಲೆಯಲ್ಲಿ ಟೇಬಲ್ ನಲ್ಲಿ ತನ್ನ ಅಧ್ಯಯನವನ್ನು ಮಾಡುತ್ತಿದ್ದಳು.

ಆದಾಗ್ಯೂ, ಅವರ ಪೋಷಕರು ಅವರ ಶಿಕ್ಷಣಕ್ಕಾಗಿ ಸಾಲ ಪಡೆದರು. TOI ಯೊಂದಿಗೆ ಮಾತನಾಡುತ್ತಾ, “ಹೆಚ್ಚಿನ ಸಮಯ, ನನ್ನ ಸ್ಯಾಂಡಲ್ ನಲ್ಲಿ ಗೋವಿನ ಸಗಣಿ ಮೆತ್ತಿರುತ್ತಿತ್ತು. ನಾನು ಶಾಲೆಯಲ್ಲಿದ್ದಾಗ, ನಾನು ಹಾಲು ಮಾರುವ ಕುಟುಂಬದವರು ಎಂದು ಸಹಪಾಠಿಗಳಿಗೆ ಹೇಳಲು ಮುಜುಗರ ವಾಗುತ್ತಿತ್ತು. ಆದರೆ ಈಗ, ನನ್ನ ಹೆತ್ತವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

Sonal Sharma

Leave a Reply