ತೃಶೂರ್: ಭಗ್ನ ಪ್ರೇಮಿಯೊಬ್ಬ ಪ್ರೇಮ ನಿರಾಕರಿಸಿದ ಅಪ್ತಾಪ್ತ ಬಾಲಕಿಯನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ಕೇರಳದ ತೃಶೂರಿನ ಸಮೀಫ ನಡೆದಿದೆ. ತೃಕ್ಕಂಡಿಯೂರ್ ವಿಷುಪ್ಪಾಡಂ ಎಂಬಲ್ಲಿ ವಲಸೆಕಾರ್ಮಿಕ ಕುಟುಂಬಕ್ಕೆ ಸೇರಿದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಾದಾತ್ ಹುಸೈನ್ (22) ಎಂಬಾತ ಇರಿದು ಕೊಲೆ ಮಾಡಿದ್ದಾನೆ.

ಪಶ್ಚಿಮ ಬಂಗಾಳದ ಸಾತ್ತಿ ಬೀವಿ ಪುತ್ರಿ ಸಮೀನಾ ಖಾತೂನ್(15) ಅನ್ಯಾಯವಾಗಿ ಕೊಲೆಯಾದ ನತದೃಷ್ಟ ಬಾಲಕಿಯಾಗಿದ್ದು, ಆರೋಪಿ ಸಾದಾತ್ ಹುಸೈನ್‍ನ ಪ್ರೇಮವನ್ನು ನಿರಾಕರಿಸಿ ಹತ್ಯೆಗೀಡಾದಳು ಎಂದು ವರದಿ ತಿಳಿಸಿದೆ. ಪ್ರೇಮ ನಿವೇದನೆ ನಡೆಸಿ ವಿಫಲನಾಗಿದ ಹುಸೇನ್ ಇದೇ ಆಕ್ರೋಶದಲ್ಲಿ ಮಾರಣಾಂತಿಕವಾಗಿ ಇರಿದಿದ್ದನು.

ಬಾಲಕಿಯನ್ನು ತಕ್ಷಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಅವಳು ರಾತ್ರೆ ಏಳೂವರೆ ಗಂಟೆಗೆ ಅವಳು ಮೃತಪಟ್ಟಿದ್ದಾಳೆ. ಹೊರರಾಜ್ಯದ ವಲಸೆ ಕಾರ್ಮಿಕರು ಬಾಡಿಗೆ ಪಡೆದು ವಾಸಿಸುತ್ತಿರುವ ಕಟ್ಟಡದಲ್ಲಿ ದುರ್ಘಟನೆ ನಡೆದಿದೆ. ಆರೋಪಿ ಯುವಕ ಬಾಲಕಿಯೊಂದಿಗೆ ಹಲವು ಬಾರಿ ಪ್ರೇಮನಿವೇದನೆ ನಡೆಸಿದ್ದನು. ಆದರೆ, ಬಾಲಕಿ ಅವನ ಬೇಡಿಕೆಯ್ನನು ನಿರಂತರವಾಗಿ ವಿರೋಧಿಸಿದ್ದಳು. ಇದರಿಂದ ಕೋಪ ಗೊಂಡ ಸಾದಾತ್ ಹುಸೈನ್ ಬಾಲಕಿಯ ಮನೆಯ ಅಡಿಗೆಕೋಣೆಗೆ ನುಗ್ಗಿ ಬಾಲಕಿಗೆ ಕತ್ತಿಯಿಂದ ಇರಿದಿದ್ದಾನೆ. ಬಾಲಕಿಯ ಬೊಬ್ಬೆ ಹೊಡೆದಾಗ ಸ್ಥಳೀಯರು ಓಡಿ ಬಂದು ರಕ್ತದದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿದ್ದರು. ಬಾಲಕಿಯ ಕಾಲು ಮತ್ತು ಎದೆಭಾಗಕ್ಕೆ ಇರಿತದಲ್ಲಿ ತೀವ್ರ ಗಾಯಗಳಾಗಿವೆ. ಆರೋಪಿ ಯುವಕ ಮಾದಕ ವ್ಯಸನಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

Leave a Reply