ಜೋರ್ಡಾನ್: ಕಳೆದ ತಿಂಗಳು ಓರ್ವ ರೂಪದರ್ಶಿ ಇರಾಕಿನಲ್ಲಿ ಅವರ ಜೀವನ ಶೈಲಿಯ ಕಾರಣಕ್ಕಾಗಿ ಹತ್ಯೆ ಮಾಡಲಾಗಿತ್ತು. ಈಗ ಮಾಜಿ ಮಿಸ್ ಇರಾಕ್ ಮತ್ತು ರೂಪದರ್ಶಿಯೊಬ್ಬರಿಗೆ ಕೊಲೆ ಬೆದರಿಕೆ ಬಂದಿದೆ. 2015ರಲ್ಲಿ ಮಿಸ್ ಇರಾಕ್ ಆಯ್ಕೆಯಾಗಿದ್ದ ಶೈಮಾ ಕಾಸಿಂ ಅಬ್ದುರ್ರಹ್ಮಾನ್ ಇರಾಕ್ ತೊರೆದು ಜೋರ್ಡಾನ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಇಸ್ಲಾಮಿಕ್ ಸ್ಟೇಟ್ ನ ಕೆಲವರು ಮುಂದಿನ ಬಾರಿ ನೀನು ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಶಿಮಾ ಹೇಳಿದ್ದಾರೆ.

ಕಳೆದ ವಾರ ಬಾಗ್ದಾದ್‍ನಲ್ಲಿ ರೂಪದರ್ಶಿ ಮತ್ತು ಇನ್ಸ್‍ಟಾಗ್ರಾಮ್ ಸ್ಟಾರ್ ಒಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ತಾರಾಫರೇಸ್ ಎನ್ನುವ 22 ವರ್ಷದ ಯುವತಿಯನ್ನು ಅವರ ಖಾಸ ಜೀವನಶೈಲಿಯ ಕಾರಣದಿಂದ ಕೊಲ್ಲಲಾಯಿತು ಎನ್ನಲಾಗುತ್ತಿದೆ. ಫರೇಸ್ ತನ್ನ ಫೋರ್ಸ್‍ಕಾರಿನಲ್ಲಿ ಹೋಗುತ್ತಿದ್ದಾಗ ಗುಂಡಿನ ಮಳೆಗೆರೆಯಲಾಗಿತ್ತು.

ಇರಾಕ್‍ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಮತ್ತು ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಅನೇಕ ಮಹಿಳೆಯರನ್ನು ಹತ್ಯೆಮಾಡಲಾಗಿದೆ. ಇರಾಕ್‍ನ ಬಾರ್ಬಿ ಡಾಲ್ ಎಂದು ಕರೆಯಲಾಗುತ್ತಿದ್ದ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾಕ್ಟರ್ ರಫೀಲ್ ಅಲ್ ಯಾಸಿರಿಯವರನ್ನು ಕೂಡ ಹತ್ಯೆ ಮಾಡಲಾಗಿದೆ. ಆದರೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಫೀಲ್ ಅತಿಯಾಗಿ ಮಾದಕ ವಸ್ತು ಉಪಯೋಗಿಸಿದ್ದು ಅವರ ಸಾವಿಗೆ ಕಾರಣವೆಂದು ಎಂದು ಹೇಳಿದ್ದಾರೆ.

Leave a Reply