ಭಾರತದಲ್ಲಿ ಕ್ರಿಕೆಟ್ ಕ್ರೇಜ್ ತುಂಬಾ ಇದೆ. ಮಹಿಳೆಯರೂ ಕ್ರಿಕೆಟ್ ನಲ್ಲಿ ತಮ್ಮ ಸಾಧನೆಯನ್ನು ತೋರುತ್ತಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭದೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ 20 ವರ್ಷಗಳ ಕಾಲ ಏಕದಿನ ಕ್ರಿಕೆಟ್ ಆಡಿದ ದಾಖಲೆ ತನ್ನ ಹೆಸರಿಗೆ ಬರೆದು ಕೊಂಡಿದ್ದಾರೆ.

ಮಿಥಾಲಿ ರಾಜ್ ರವರ ಏಕದಿನ ವೃತ್ತಿಜೀವನವು 20 ವರ್ಷ ಮತ್ತು 105 ದಿನಗಳನ್ನು ಪೂರೈಸಿದೆ. ಮಾತ್ರವಲ್ಲ ಮಿಥಾಲಿ 20 ವರ್ಷಗಳ ಕಾಲ ಏಕದಿನ ಕ್ರಿಕೆಟ್ ಆಡಿದ ಮೊದಲ ಮಹಿಳಾ ಕ್ರಿಕೆಟ್ ಪಟು ಎಂಬ ಕೀರ್ತಿಗೂ ಪಾತ್ರರಾರಿದ್ದಾರೆ. ಮಿಥಾಲಿಯ ಕ್ರೆಕೆಟ್ ಜೀವನವು 26 ಜೂನ್ 1999 ರಂದು ಪ್ರಾರಂಭವಾಯಿತು.

ಪುರುಷರ ಕ್ರಿಕೆಟ್‌ನಲ್ಲಿ ಸುದೀರ್ಘ ಏಕದಿನ ವೃತ್ತಿಜೀವನದ ದಾಖಲೆಯು ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ 22 ವರ್ಷಗಳ ಕ್ರಿಕೆಟ್ ಆಡಿದ್ದಾರೆ. ಶ್ರೀಲಂಕಾದ ದಂತಕಥೆ ಸನತ್ ಜಯಸೂರ್ಯ ಮತ್ತು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಕೂಡಾ 20 ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಈ ಮಹಾನ್ ಕ್ರಿಕೆಟಿಗರ ಮಧ್ಯೆ ಮಿಥಾಲಿ 20 ವರ್ಷಗಳ ಕಾಲ ಏಕದಿನ ಕ್ರಿಕೆಟ್ ಆಡಿದ ನಾಲ್ಕನೇ ಕ್ರಿಕೆಟ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here