ಯಾರ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು ಹೇಳಲಾಗದು. ಹುಟ್ಟಿದು ಕಸದ ತೊಟ್ಟಿಯಲ್ಲಿ, ಆದರೆ ಇಂದು ಅದೇ ಮಗು ಬಾಲಿವುಡ್ ಗೆ ಎಂಟ್ರಿ ಮಾಡಲಿರುವುದು ನಿಜಕ್ಕೂ ಎಲ್ಲರಿಗೂ ಕುತೂಹಲಕಾರಿಯಾಗಿದೆ. ಅಂದು ರಸ್ತೆ ಬದಿಯಲ್ಲಿ ಅನಾಥವಾಗಿ ಕಸದ ತೊಟ್ಟಿಯಲ್ಲಿ ಇದ್ದ ಮಗುವನ್ನು ಬಾಲಿವುಡ್ ದಾದಾ ಮಿಥುನ್ ಚಕ್ರವರ್ತಿ ದತ್ತು ಪಡೆದಿದ್ದರು. ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಣ್ಣು ಮಗು ಇಂದು ಬಾಲಿವುಡ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದೆ. ಖ್ಯಾತ ನಟ ಮಿಥುನ್ ಚಕ್ರವರ್ತಿ ದತ್ತು ಪುತ್ರಿ ದಿಶಾನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಆಗಲೇ ಮೂವರು ಮಕ್ಕಳನ್ನು ಹೊಂದಿದ್ದ ಮಿಥುನ್ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ದಂಪತಿ ಈ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಸ್ವಂತ ಮಗಳಂತೆ ಸಾಕಿದ್ದಾರೆ.

ತನಗೆ ಅಪ್ಪನಂತೆ ಬಾಲಿವುಡ್ ನಲ್ಲಿ ಹೆಸರು ಗಳಿಸಬೇಕು ಎಂದು ಕನಸು ಕಂಡ ದಿಶಾನಿಯವರಿಗೆ ಇದೀಗ ಅಪ್ಪ ಅಮ್ಮನ ಬೆಂಬಲವೂ ಇದೆ. ದಿಶಾನಿ ನ್ಯೂಯಾರ್ಕ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದು, ತನ್ನ ಇತ್ತೀಚಿನ ಫೋಟೋವನ್ನು ಆಕೆ ಶೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ಸಾಕಷ್ಟು ಮಂದಿ ಹೊಸ ಪ್ರತಿಭೆಯ ನಿರೀಕ್ಷೆಯಲ್ಲಿ ಇದ್ದಾರೆ. ಈಗಾಗಲೇ ಮಹೇಶ್ ಭಟ್ ಮಗಳು ಆಲಿಯಾ ಭಟ್, ಸೈಫ್ ಅಲಿ ಖಾನ್ ಮಗಳು ಸಾರ ಬಣ್ಣದ ಲೋಕದಲ್ಲಿ ಪಾದಾರ್ಪಣೆ ಮಾಡಿದ್ದು, ಅವರ ಮಧ್ಯೆ ದಿಶಾನಿಯ ಎಂಟ್ರಿ ಹೇಗೆ ಸಂಚಲನ ಮೂಡಿಸುತ್ತದೆ ಎಂದು ನೋಡಬೇಕಾಗುತ್ತದೆ.

Leave a Reply