ಮೊಬೈಲ್ ದೇಹದ ಉಸಿರು ನಮ್ಮ ಕಾಲದ ಆತ್ಮ ಸಂಗಾತಿ ” ಮೋಬೈಲ್” ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಮೋಬೈಲ್ ಇಲ್ಲದಿದ್ದರೆ ದೇಹಕ್ಕೆ ಉಸಿರೇ ಇಲ್ಲಾದಾಗಿದೆ. ಹಿಂದೆ ಪೇಜರ್ ಎಂಬ ಸಾಧನ ಪ್ಯಾಂಟಿನ ಬೆಲ್ಟಿಗೆ ತಗಲಿಕೊಂಡು ಶೋಭಿಸುತ್ತಿದ್ದ ದಿನಗಳು ಕಣ್ಣುಮುಚ್ಚಿ ತೆರೆಯುದರೋಳಗೆ ಕಳೆದುಹೋಗಿದೆ. ಆ “ಪೇಜರ್ ” ನ್ನು ಗುಡಿಸಿ ಮೂಲೆಗುಂಪಾಗಿಸಿದ ಕೀರ್ತಿ ಮೊಬೈಲ್ನದ್ದು.

ಇಂದು ಯಾರ ಕೈಯಲ್ಲಿ ನೋಡಿದರು ಮೊಬೈಲ್ . ಸ್ಥಿರ ದೂರವಾಣಿಗಳನ್ನು ಇಲ್ಲವಾಗಿಸುವ ಹಂತಕ್ಕೆ ಮೊಬೈಲ್ ತಲುಪಿದೆ. ವಿಸಿಟಿಂಗ್ ಕಾರ್ಡ್ ಗಳನ್ನು ಗಮನಿಸಿದರೆ ಅಲ್ಲಿ ಹೆಸರು, ವಿಳಾಸ, ದೂರವಾಣಿ, ವೈಬ್ ಸೆಟ್, ಇಮೇಲ್ ಗಳೋಂದಿಗೆ ಮೊಬೈಲ್ ಸಂಖೈಯು ಇರುತ್ತದೆ. ಆದ್ದರಿಂದ ಮೊಬೈಲ್ ನ್ನು ಲೋಕಸಂಚಾರಿ ಎಂದರೆ ತಪ್ಪಾಗದು. ಮೊಬೈಲ್ ಗುಣವೇ ಮಾತಾನಾಡುವುದು, ಮಾತಾನಾಡಿಸುವುದು “ಮಾತು ಕಡಿಮೆ ಹೆಚ್ಚು ದುಡಿಮೆ” ಎಂಬ ಕಾಯಕದ ಘೊಷಣೆಯೆಲ್ಲ ಮೊಬೈಲ್ ನೆದುರು ಕರಗಿ ಕಾಣದಾಗಿದೆ. ಹಿಂದೆ ಬಸ್ಸ್ ನಲ್ಲಿ ಜನಜಂಗುಲಿಯಲ್ಲಿ , ಯಾರಾದರು ಪಿಕ್ ಪಾಕೆಟ್ ಎಂದರೆ ಎಲ್ಲರೂ ತಮ್ಮ ಕಿಸೆಗಳನ್ನು ಮುಟ್ಟಿನೋಡಿಕೊಳ್ಳುತ್ತಿದ್ದರು. ಆದರೆ ಈಗ ಎಟಿಎಂ ಕಾರ್ಡ್ ಬಂದ ಮೇಲೆ ಆತಂಕ ಕಡಿಮೆ, ಆದರೆ ಮೊಬೈಲ್ ನ ಪಾಡು ಹಾಗಲ್ಲ ಯಾರಾದರೂ ಒಬ್ಬರ ಮೊಬೈಲ್ ರಿಂಗದಾರೆ ಸಾಕು ತಮ್ಮ ಮೊಬೈಲ್ ನ್ನು ಕೈಗೆತ್ತಿಕೊಂಡು ನೋಡುವುದಲ್ಲು ಕಾಣಬಹುದು. ನಡೆದು ಹೋಗುವವರು ಮೊಬೈಲ್ ನಲ್ಲಿ ಮಾತಾನಾಡುವುದನ್ನು ಗಮನಿಸಬೇಕು.

ರೇಡಿಯೋ, ಟಿ.ವಿ ಗಳಂತೆ ಈ ಪುಟ್ಟ ಸಾಧನ ಮನೋರಂಜನೆಯನ್ನು ನೀಡಿ ಮನಸ್ಸಿಗೆ ಮುದನೀಡುತ್ತದೆ. ಕಿವಿಗೆ ಮೊಬೈಲ್ ನ್ನು ಅಂಟಿಸಿಕೊಂಡು ಅದಕ್ಕೆ ಕೈಯನ್ನು ಮುಟ್ಟಿಕೊಂಡು ಮಾತಾನಾಡುತ್ತಾರೆ. ಕೆಲವೊಮ್ಮೆ ದೇಹದ ಸುತ್ತ ವಯರ್ ಗಳನ್ನು ಸುತ್ತಿಸಿಕೊಂಡು, ಕಿವಿಗೆರಡು ವಯರ್ ಗಳನ್ನು ಚುಚ್ಚಿಕೊಂಡು ಮಾತಾನಾಡುವುದನ್ನು ಕೂಡ ಕಾಣಬಹುದು .

ಈಗೇ ಮಾತಾನಾಡವುವರು ಏಕಪಾತ್ರಭಿನಯದ ಅಥವಾ ಮಿಮಿಕ್ರಿ ಕಲಾವಿದರಂತೆ ತಮ್ಮಷ್ಟಕ್ಕೆ ತಾವು ನಗುತ್ತಾ, ಮಾತಾನಾಡುತ್ತ , ಇನ್ನೊಂದು ಕೈಯಲ್ಲಿ ಇನ್ನೇನನ್ನು ಸೂಚಿಸುತ್ತಾ, ‘ರಿಯಾಲಿಟಿ ಶೋ’ ನ ನಟರಂತಿರುತ್ತಾರೆ. ಮೊಬೈಲ್ನಂತಹ ಪುಟ್ಟ ಸಾಧನದಲ್ಲಿ ಇಡಿ ಜಗತ್ತನ್ನು ಕಾಣಬಹುದು. ಒಂದೆರಡು ಬಟ್ ನಗಳನ್ನು ಒತ್ತಿದರೆ ಸಾಕು ನಮಗೆ ಬೇಕಾದ ಮಾಹಿತಿ ವಿಷಯಗಳು ಪಟ ಪಟನೆ ಸಿಗುತ್ತದೆ.

ಇನ್ನೂ ಇಂದಿನ ಯುವಕ ಯುವತಿಯರಿಗೆ ಮೊಬೈಲ್ ಕೈಯಲ್ಲಿ ಇಲ್ಲದಿದ್ದರೆ ನಿದ್ದೆಯೇ ಬಾರದು ಕೆಲವೂಂದು ಕಾಲೇಜುಗಳಲ್ಲಿ ಮೊಬೈಲ್ ಉಪಯೋಗ ನಿಷೇಧವಿದ್ದರೂ, ಅದನ್ನು ತಂದು, ಚೆಕ್ಕಿಂಗ್ ಗೆ ಬರುವಾಗ ಆ ಮೊಬೈಲ್ ನ್ನು ಉಳಿಸಿಕೊಳ್ಳಲು ಚಡಪಡಿಸುವುದನ್ನು ಕಂಡರೆ ನಗು ಬರುತ್ತದೆ.ಈ ಮೊಬೈಲ್ ಹಾವಳಿ ಎಷ್ಟಾಗಿದೆ ಎಂದರೆ ಕೂಲಿ ಕಾರ್ಮಿಕರು, ಮೀನುಗಾರರು, ಹಾಲು ಮಾರುವವರು, ಆದೂ ಬಿಡಿ, ಬಿಕ್ಷುಕರ ಕೈಯಲ್ಲಿ ಕೂಡ ರಾರಾಜಿಸುತ್ತದೆ. ವ್ಯಾಪಾರಿಗಳಿಗೆ ಮೊಬೈಲ್ ಇಲ್ಲದೆ ವ್ಯಾಪಾರವೇ ಆಗಲ್ಲ ಅಲ್ಲ್ಲದೇ ಇದರಿಂದ ಸ್ಥಿರ ದೂರವಾಣಿಗಳಂತೂ ಮೂಲೆಗೆ ಬಿದ್ದಿದೆ. ಒಟ್ಟಿನಲ್ಲಿ ಈ ಮೊಬೈಲ್ ನಮಗೆ ಉಪಕಾರಿಯಾಗಬೇಕೆ ಹೊರತು ಅಪಾಕಾರಿಯಾಗಬಾರದು. ಕೆಲವೊಂದು ಸಲ ಕಛೇರಿಯಲ್ಲಿ ಕೆಲಸ ಮಾಡುವ ನೌಕರರು ಹಾಗೂ ಅಧಿಕಾರಿಗಳು ಮೊಬೈಲ್ ನಲ್ಲಿ ಮಾತಾನಾಡುತ್ತ ಕೆಲಸದ ಮೇಲೆ ಗಮನ ಹರಿಸದೆ ಅಪಯಗಳು ಸಂಭವಿಸಿರುವುದು ನಾವು ಕೇಳಿರಬಹುದು. ಹಾಗೇಯೇ ಚಾಲಕರು ವಾಹನ ಚಾಲನೆಯಲ್ಲಿರುವಾಗ ಮೊಬೈಲ್ ಬಳಸಿ, ವಾಹನ ಅಪಘಾತಕ್ಕೆ ಒಳಗಾಗಿ , ಜೀವಕ್ಕೆ ಅಪಾಯ ತಂದಿರಬಹುದು.

ಇನ್ನು ವಿದ್ಯಾರ್ಥಿಗಳು ಕಲಿಯಬೇಕಾದ ಸಂದರ್ಬದಲ್ಲಿ ಮೊಬೈಲ್ ನಲ್ಲಿ ಚಾಟಿಂಗ್ ಮಾಡಿ ಅಥವಾ ಅದನ್ನೇ ಹೆಚ್ಚು ಉಪಯೋಗಿಸಿದರಿಂದ ಅವರ ಜೀವನಕ್ಕೆ ಸೋಲಾಗಿರಬಹುದು. ಈ ಮೊಬೈಲ್ ನಲ್ಲಿ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯಗಳು ಇವೆ. ಮೊಬೈಲ್ ನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಅದರ ಪ್ರಯೋಜನ ಪಡೆದುಕೊಳ್ಳೋಣ ಆದರೆ ಇದರ ದುರುಪಯೋಗ ಪಡೆದುಕೊಂಡರೇ ನಾವು ಮಾಡಬೇಕಾದ ಸಾಧನಗಳು, ನಮ್ಮ ಗುರಿ ತಲುಪಲು ಅಸಾಧ್ಯ. ಆದರಿಂದ ಮೊಬೈಲ್ನ ನ್ನು ಹಿತ ಮಿತವಾಗಿ ಬಳಸಿ ನಮ್ಮ ಗುರಿ ತಲುಪಲು ಪ್ರಯತ್ನಿಸೋಣ.

ಲವೀನಾ ಫರ್ನಾಂಡೀಸ್

Leave a Reply