ಕೆಲವು ಜನರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾರೆ ಮತ್ತು ಅಲ್ಲೇ ಪಾನ್ ಉಗುಳಿ ಆ ಮಾತೆಯ ಮೇಲೆ ಕೊಳೆ ಮಾಡುತ್ತಾರೆ ಎಂದು ನರೇಂದ್ರ ಮೋದಿ  ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತ ಮಾತೆಯ ಮೇಲೆ ಜೈಕಾರ ಕೂಗಿ ಮತ್ತೆ ಅದೇ ಮಾತೆಯ ಮೇಲೆ ಬನಾರಾಸಿ ಪಾನ್ ಉಗುಳುವುದು ಯಾವ ರೀತಿಯ ಮಾತೃ ಪ್ರೇಮವಾಗಿದೆ ? ಇದು ಯಾವ ರೀತಿಯ ಜೈಕಾರ ವಾಗಿದೆ? ನಾವು ಭಾರತ್ ಮಾತಾಕಿ ಜೈ ಎನ್ನಲು ತುಂಬಾ ಕಷ್ಟವನ್ನು ಅನುಭವಿಸಿದ್ದೇವೆ. ಆದ್ದರಿಂದ ಯಾವ ಶಕ್ತಿಯೊಂದಿಗೆ ನಾವು ಸ್ವಾತಂತ್ರ್ಯದ ಆಂದೋಲನ ಮುನ್ನಡೆಸಿದ್ದೆವೋ, ಅದೇ ಶಕ್ತಿಯೊಂದಿಗೆ ನಾವು ದೇಶವನ್ನು ಉತ್ತುಂಗತೆಗೆ ಸಾಗಿಸಲು ಪರಿಶ್ರಮ ಪಡಬೇಕು ಎಂದು ಹೇಳಿದರು.

Leave a Reply