ಇತ್ತೀಚಿಗೆ ಮಾಲ್ಡೀವ್ಸ್ ಗೆ ಭೇಟಿಕೊಟ್ಟ ಪ್ರಧಾನಿ ಮೋದಿ ಅಲ್ಲಿನ ಪ್ರಸಿದ್ಧ ಮಸೀದಿಯನ್ನು ರಕ್ಷಿಸುವುದಾಗಿ ಹೇಳಿದ್ದಾರೆ. ಶುಕ್ರವಾರ ಮಸೀದಿ ಎಂದು ಖ್ಯಾತವಾಗಿರುವ “ಹುಕುರು ಮಿಸ್ಕಿ”ಯನ್ನು ಸಂರಕ್ಷಿಸಲು ಭಾರತವು ಮಾಲ್ಡೀವ್ಸ್‌ಗೆ ಸಹಾಯ ಮಾಡಲಿದ್ದು, ಮಾಲ್ಡೀವ್ಸ್ ಸುಸ್ಥಿರ ಅಭಿವೃದ್ಧಿಯ ಕಡೆಗೆ ಕೆಲಸ ಮಾಡುತ್ತಿದೆ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಭಾಗವಾಗಿರುವುದರ ಬಗ್ಗೆ ಭಾರತಕ್ಕೆ ಸಂತೋಷವಿದೆ ಎಂದು ಹೇಳಿದರು.
ಹವಳದ ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಈ ಮಸೀದಿಯು ಮಾಲ್ಡೀವ್ಸ್‌ನ ಒಂದು ಐತಿಹಾಸಿಕ ಹೆಗ್ಗುರುತಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಇತಿಹಾಸಕ್ಕಿಂತಲೂ ಹಳೆಯದು ಎಂದು ಮಾಲ್ಡೀವ್ಸ್ ಪಾರ್ಲಿಮೆಂಟ್ ಪೀಪಲ್ಸ್ ಮಜ್ಲಿಸ್‌ನಲ್ಲಿ ಹವಳದ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಮಸೀದಿಯನ್ನು ಕೊಂಡಾಡುತ್ತಾ ಹೇಳಿದರು.
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಭಾರತೀಯ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವತಿಯಿಂದ ಶುಕ್ರವಾರ ಮಸೀದಿಯ ಮರುಸ್ಥಾಪನೆ ನಡೆಸಲು ಕೊಡುಗೆ ನೀಡುವುದಾಗಿ ಹೇಳಿದ ಭಾರತಕ್ಕೆ ಮತ್ತು ಭಾರತೀಯ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

1658 ರಲ್ಲಿ ಸ್ಥಾಪನೆಯಾದ ಈ ಮಸೀದಿಯು ಮಾಲೆ ನಗರದ ಅತ್ಯಂತ ಹಳೆಯ ಮಸೀದಿಯಾಗಿದೆ. 2008 ರಲ್ಲಿ ಈ ಮಸೀದಿಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ತನ್ನ ವಿಶ್ವ ಪಾರಂಪರಿಕ ತಾಣದಲ್ಲಿ ಸೇರಿಸಿತ್ತು. ಹವಳದ ಕಲ್ಲಿನಿಂದ ನಿರ್ಮಿಸಲಾಗಿರುವ ಈ ಮಸೀದಿಯನ್ನು ಸಮುದ್ರ ಸಂಸ್ಕೃತಿ ವಾಸ್ತುಕಲೆಯ ಅದ್ವಿತೀಯ ಉದಾಹರಣೆ ಎನ್ನಲಾಗಿದೆ.

Leave a Reply