ಉತ್ತರಾಖಂಡ : ಪ್ರಧಾನಿ ಮೋದಿಯ ಫೋಟೊ ತೂಗು ಹಾಕಬೇಕೆಂದು ಉತ್ತರಾಖಂಡದ ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದಲ್ಲಿ ಸರಕಾರಿ ನೆರವು ಪಡೆಯುವ ಮದರಸಾಗಳಲ್ಲಿ ಪ್ರಧಾನಿ ಮೋದಿ ಫೋಟೊ ತೂಗು ಹಾಕದಿರುವುದು ತಪ್ಪು ಎಂದು ತ್ರಿವೇಂದ್ರ ಸಿಂಗ್ ಹೇಳಿದರು.

ವರದಿಯಾಗಿರುವ ಪ್ರಕಾರ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾಜ್ಯ ಸರಕಾರದಿಂದ ಅನುದಾನ ಪಡೆಯುತ್ತಿರುವ ಮದ್ರಸಾಗಳಲ್ಲಿ ಪ್ರಧಾನಿ ಮೋದಿಯ ಫೋಟೊ ತೂಗು ಹಾಕಬೇಕು ಎನ್ನುವ ಆದೇಶವನ್ನು ಪಾಲಿಸಬೇಕಾಗಿದೆ.
ಈ ಪ್ರಕರಣದಲ್ಲಿ ಮುಂದುವರಿದು ಮಾತಾಡಿದ ಪ್ರಧಾನಿ ಮದರಸಾ ಕೂಡಾ ಇತರ ಶಿಕ್ಷಣ ಸಂಸ್ಥೆಗಳ ರೀತಿಯಾಗಿದೆ. ಈ ಆದೇಶ ಎಲ್ಲರಿಗೂ ಅನ್ವಯವಾಗುತ್ತಿದೆ.
ಮದರಸಾ ತನ್ನ ಪರಂಪರಾಗತ ದೃಷ್ಟಿಕೋನದಲ್ಲಿ ಬದಲಾವಣೆ ತರಬೇಕಿದೆ. ಹಿಂದಿನ ಚಿಂತನೆಗಳಲ್ಲಿ ಬದಲಾವಣೆ ತರಬೇಕಾಗಿದೆ.
ಸರಕಾರದ ಸಹಾಯ ಗಳಿಸುತ್ತಿರುವ ಉತ್ತರಾಖಂಡದ ಮದರಸಾದಲ್ಲಿ ಧಾರ್ಮಿಕ ವಿಶ್ವಾಸಗಳ ಕಾರಣ ನೀಡಿ ಮೋದಿಯ ಫೋಟೊ ಹಚ್ಚಲು ನಿರಾಕರಿಸಲಾಗಿದೆ.

ಮದ್ರಸಾಗಳ ಈ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ತಮ್ಮ ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ.

Leave a Reply