ಹೈದರಾಬಾದ್: ಭಾರತ ಕ್ರಿಕೆಟ್ ತಂಡ ವಿಶ್ವಕಪ್‌ ಗೆಲ್ಲಲು ಸಮರ್ಥವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಬಣ್ಣಿಸಿದ್ದಾರೆ.
ಮಂಗಳವಾರ ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ನಮ್ಮ ಕ್ರಿಕೆಟ್ ತಂಡಕ್ಕೆ ಉತ್ತಮ ಅವಕಾಶವಿದೆ. ನಾವು ವಿಶ್ವ ದರ್ಜೆಯ ಬೌಲರ್‌ಗಳನ್ನು ಹೊಂದಿದ್ದೇವೆ. ಸಂದರ್ಭ ಬಂದಾಗ ನಮ್ಮ ಬೌಲರ್‌ಗಳು ಆಕ್ರಮಣಾಕಾರಿ ಆಟ ತೋರುವರು ಎಂದರು.
ಉತ್ತಮ ರೀತಿಯಲ್ಲಿ ಆಡುವ ಎಲ್ಲ ಸಾಮಥ೯ವನ್ನು ವಿರಾಟ್ ಕೊಹ್ಲಿ ನಾಯಕತ್ವದ ತಂಡ ಹೊಂದಿದೆ. ಅವರು ಗೆಲುವು ಸಾಧಿಸದಿದ್ದರೆ ನನಗೆ ತುಂಬಾ ನಿರಾಸೆಯಾಗುತ್ತದೆ ಎಂದು ಮನಬಿಚ್ಚಿ ಮಾತನಾಡಿದರು.

ಜಸ್ಪ್ರೀತ್ ಬೂಮ್ರ ವಿಶ್ವದರ್ಜೆಯ ವೇಗದ ಬೌಲರ್ ಆಗಿದ್ದಾರೆ. ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ರೀತಿಯಲ್ಲಿ ಬೌಲಿಂಗ್ ಪ್ರದರ್ಶಿಸಬಲ್ಲರು ಎಂದು ಶ್ಲಾಘಿಸಿದ್ದಾರೆ. ಕಪ್ ಗೆಲ್ಲುವ ರಾಷ್ಟ್ರಗಳಲ್ಲಿ ಭಾರತ ನನ್ನ ಮೊದಲನೇ ನೆಚ್ಚಿನ ತಂಡವಾಗಿದೆ. ಇಂಗ್ಲೆಂಡ್ ಎರಡನೇ ತಂಡವಾಗಿದೆ. ಆಸ್ಟ್ರೇಲಿಯಾ ಮೂರನೇ ತಂಡವಾಗಿದೆ. ನಿರ್ದಿಷ್ಟ ದಿನದಂದು ಉತ್ತಮವಾಗಿ ಆಡುವ ತಂಡ ಯಾವತ್ತೂ ಗೆಲ್ಲುತ್ತದೆ. ಏಕೆಂದರೆ ಆಟದಲ್ಲಿ ಕೊನೆಯ ಕ್ಷಣದಲ್ಲಿ ಏನಾದರೂ ಆಗಬಹುದು ಎಂದು ಅಭಿಪ್ರಾಯಪಟ್ಟರು.

Leave a Reply