ಇಂದೋರ್: ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರ ಬೌಲಿಂಗ್ ಕೌಶಲ್ಯವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಬಾಂಗ್ಲಾದೇಶದ ವಿರುದ್ದ ಇಂದೋರ್ ಟೆಸ್ಟ್ ಪಂದ್ಯದಲ್ಲಿ 130 ರನ್‌ಗಳ ಇನ್ನಿಂಗ್ಸ್ ಜಯ ಸಾಧಿಸಲು, ತಂಡದ ಬೌಲರ ಗಳ ಪರಿಶ್ರಮ ಅನನ್ಯವಾದದ್ದು ಎಂದು ಕೊಂಡಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 150 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ ಬೌಲ‌ರ್ ಗಳು, ಅತ್ಯುತ್ತಮ ಕೈಚಳಕ ತೋರುವ ಮೂಲಕ ಬಾಂಗ್ಲಾದ ದಾಂಡಿಗರನ್ನು ಕಂಗೆಡಿಸಿದ್ದರು.
ತಂಡದ ಬೌಲರ್ ಗಳು ಪಡೆದ ಒಟ್ಟು 14 ವಿಕೆಟ್‌ಗಳಲ್ಲಿ 7 ವಿಕೆಟ್‌ಗಳನ್ನು ಮೊಹಮ್ಮದ್ ಶಮಿ ಒಬ್ಬರೇ ಉರುಳಿಸಿ ಮತ್ತೊಮ್ಮೆ ತಮ್ಮ ಬೌಲಿಂಗ್ ಸಾಮರ್ಥ್ಯ ಏನೆಂಬುದನ್ನು ತಕ್ಕ ಸಂದರ್ಭದಲ್ಲಿ ತೋರಿಸಿದ್ದಾರೆ.

ವೇಗಿ ಮೊಹಮ್ಮದ್ ಶಮಿ ಮತ್ತು ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ ಸ್ಥಾನಗಳಿಗೆ ಏರಿದ್ದಾರೆ. ಪಂದ್ಯಕ್ಕಾಗಿ ಶಮಿ 58 ಕ್ಕೆ 7 ವಿಕೆಟ್ ಗಳಿಸಿ 790 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬೌಲರ್‌ಗಳಲ್ಲಿ ಈಗ 7 ನೇ ಸ್ಥಾನದಲ್ಲಿದ್ದಾರೆ.  ಕಪಿಲ್ ದೇವ್ (877) ಮತ್ತು ಬುಮ್ರಾ (832) ನಂತರ ಭಾರತದ ವೇಗಿಗಳು ಮೂರನೇ ಅತ್ಯುತ್ತಮ ಸ್ಥಾನದಲ್ಲಿದ್ದರೆ.

LEAVE A REPLY

Please enter your comment!
Please enter your name here