ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ಹೊಸ ವರ್ಷದ ಶುಭಾಶಯ ಕೋರಲು ಅವರು ಟ್ವಿಟರ್ ಖಾತೆಯಲ್ಲಿ ಶಿವಲಿಂಗ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನೀವು ಶಿವಲಿಂಗದ ಚಿತ್ರವನ್ನು ಅಪ್ಲೋಡ್ ಮಾಡಿ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ. ಅಲ್ಲಾಹ್ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಖಾರವಾಗಿ ಮರು ಟ್ವೀಟ್ ಮಾಡಲಾಗಿದೆ. ಈ ಹಿಂದೆ ಪತ್ನಿಯೊಂದಿಗೆ ಫೋಟೋ ಹಾಗೂ ಮಗಳ ಹುಟ್ಟುಹಬ್ಬದ ಫೋಟೋ ಹಾಕಿದ್ದ ಶಮಿ ಅವರನ್ನು ಮುಸ್ಲಿಂ ವಿರೋಧಿ ಎಂದು ಟೀಕೆ ಮಾಡಲಾಗಿತ್ತು.

Leave a Reply