ದಾವಣಗೆರೆ: ಕೆಎಸ್‍ಆರ್ ಟಿಸಿ ಚಾಲಕನೋರ್ವನು ಕೋತಿ ಕೈಗೆ ಸ್ಟೇರಿಂಗ್ ಕೊಟ್ಟು ಬಸ್ಸು ಚಲಾಯಿಸುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಕೆಎಸ್‍ಆರ್‍ಟಿಸಿ ಡಿಪೋದ ಪ್ರಕಾಶ್ ರವರ ಇಂತಹ ಬೇಜವಾಬ್ದಾರಿತನ ಮತ್ತು ಕರ್ತವ್ಯಲೋಪಕ್ಕೆ ಚಾಲಕನನ್ನು ಅಮಾನತುಗೊಳಿಸಲಾಗಿದೆ.

ಅಕ್ಟೋಬರ್ 1 ರಂದು ದಾವಣಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ-ಆಲಿಕಲ್ಲುಗೆ ಹೋಗುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ಪ್ರಕಾಶ್ ಗೇರ್ ಹಾಕಿದರೆ, ಕೋತಿ ಸ್ಟೇರಿಂಗ್ ತಿರುಗಿಸುತ್ತಿತ್ತು. ಇದನ್ನು ಪ್ರಯಾಣಿಕರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು.

Leave a Reply