ಇದು ನಮ್ಮ ಊರು: ಈ ಸುದ್ದಿ ನಿಜಕ್ಕೂ ಕಣ್ಣೀರು ತರಿಸುವಂತದ್ದು, ವೃದ್ಧ ತಾಯಿಯನ್ನು ಆ ಮಗ -ಸೊಸೆ ನಡೆಸಿಕೊಂಡ ರೀತಿ ನಿಜಕ್ಕೂ ಬೇಸರ ತರಿಸುವಂತಿದೆ. ಈ ಘಟನೆ ಇಡೀ ಮಾನವ ಕುಲಕ್ಕೆ ಅವಮಾನ ಅಂತ ಹೇಳಬಹುದು. 65 ವರ್ಷದ ವೃದ್ಧ ತಾಯಿಗೆ ಕರೋನಾ ಸೋಂಕು ಭಾದಿಸಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊನ್ನೆ ಗುಣ ಮುಖ ರಾಗಿ ಮನೆಗೆ ಹೋದಾಗ ಮಗ ಮತ್ತು ಸೊಸೆ ಆ ತಾಯಿಗೆ ಮನೆ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಈ ಘಟನೆ ತೆಲಂಗಾಣದ ನಿಜಾಂಬಾಬಾದ್‌ನಿಂದ ವರದಿಯಾಗಿದೆ.

ಘಟನೆ ತಿಳಿದು ನೆರೆದ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದ ಬಳಿಕ ಮಗ ಮತ್ತು ಸೊಸೆಯ ಮನ ವೊಲಿಸಿ ವೃದ್ಧೆಗೆ ಮನೆಯಲ್ಲಿ ಇರಲು ಅವಕಾಶ ಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಈ ವೃದ್ಧೆಯನ್ನು ಅವರ ಮಗ ಮತ್ತು ಸೊಸೆ ವರ್ಷದ ಹಿಂದೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದರು. ಆ ತಾಯಿ ಅಲ್ಲಿ ಕರೋನಾ ಸೋಂಕಿಗೆ ಒಳಗಾದರು. ಕರೋನಾದಿಂದ ಚೇತರಿಸಿಕೊಂಡ ನಂತರ, ವೃದ್ಧಾಶ್ರಮಕ್ಕೆ ಮರಳುವ ಬದಲು ತನ್ನ ಮನೆಗೆ ಮರಳಲು ಅವರು ಬಯಸಿದ್ದರು ಎನ್ನಲಾಗಿದೆ. ಆದರೆ ಅವರ ಮಗ ಮತ್ತು ಸೊಸೆ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಆಟೋ ಹಿಡಿದು ಮನೆಗೆ ಬಂದಿದ್ದರು ಕೂಡ ಜಗಲಿಯಲ್ಲೇ ರಾತ್ರಿ ಕಳೆಯಬೇಕಾಯಿತು. ಕೊನೆಗೆ ನೆರೆಹೊರೆಯವರ ಸಹಾಯದಿಂದ ಪೋಲೀಸರ ಮಧ್ಯಸ್ಥಿಕೆಯಲ್ಲಿ ಇದೀಗ ಅವರು ಮನೆಗೆ ಪ್ರವೇಶ ಪಡೆದಿದ್ದಾರೆ. ಆದರೂ ಕೂಡ ಇಂತಹ ಕಟುಕ ಮಕ್ಕಳು ಆ ತಾಯಿಯನ್ನು ಎಷ್ಟು ದಿನ ತಮ್ಮ ಮನೆಯೊಳಗೆ ಇಡುವರೋ ದೇವರಿಗೆ ಗೊತ್ತು.

Leave a Reply