ಇತ್ತೀಚಿಗೆ ಮುಸ್ಲಿಂ ಕುಟುಂಬವೊಂದು ಹುಟ್ಟಿದ ಮಗುವಿಗೆ ನರೇಂದ್ರ ಮೋದಿಯೆಂದು ಹೆಸರಿಸಿದ್ದು, ಇದೀಗ ಮಗುವಿನ ಹೆಸರನ್ನು ಮೊಹಮ್ಮದ್ ಮೋದಿ ಎಂದು ಬದಲಾಯಿಸಿದೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಮುಸ್ಲಿಮರ ಕುಟುಂಬ ತಮ್ಮ ನವಜಾತ ಪುತ್ರನಿಗೆ ನರೇಂದ್ರ ಮೋದಿ ಎಂದು ಹೆಸರಿಸಿದ್ದರು. ಈಗ ಮಗುವಿನ ಸಂಪೂರ್ಣ ಹೆಸರು ಮೊಹಮ್ಮದ್ ಅಲ್ತಾಫ್ ಆಲಮ್ ಮೋದಿ ಎಂದು ಮಗುವಿನ ಹೆತ್ತವರು ಬದಲಿಸಿದ್ದಾರೆ. ಈ ಹೆಸರಿನ ಕಾರಣದಿಂದ ಕೆಲವು ಕುಟುಂಬದ ಸದಸ್ಯರು ಹುಟ್ಟಿದ ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆಂದು ಹುಡುಗನ ತಾಯಿ ಮೆಹ್ನಾಜ್ ಬೇಗಮ್ ಹೇಳಿದರು. ಮಾತ್ರವಲ್ಲ,ಈ ಮಗು ಮೇ 23 ರಂದು ಜನಿಸಿದ್ದಲ್ಲ ಬದಲಾಗಿ ಮೇ 12 ರಂದು ಜನಿಸಿದೆ ಎಂದು ಅಲ್ಲ ವೈದ್ಯರು ಹೇಳಿದರು.

ಎಎನ್ಐ ಜೊತೆ ಮಾತನಾಡಿದ ಮೆಹನಾಜ್, ನಾವು ಈ ಹೆಸರಿನ ಮೂಲಕ ವಿವಾದ ವುಂಟು ಮಾಡಲು ಬಯಸುವುದಿಲ್ಲ. ಅದಕ್ಕಾಗಿ ಹೆಸರನ್ನು ಬದಲಾಯಿಸಿದ್ದೇವೆ. ಈಗಲೂ ಮಗುವಿನ ಹೆಸರಿನ ಜೊತೆ ಮೋದಿಯ ಹೆಸರು ಇದೆ. ಮಾತ್ರವಲ್ಲ, ಈ ಕುಟುಂಬ ಮೋದಿಯ ಅಭಿಮಾನಿ. ದೇಶದ ಪ್ರಧಾನಿಯ ಹೆಸರಿಟ್ಟದ್ದಕ್ಕೆ ಹೆಮ್ಮೆಯಿದೆ ಎಂದು ಮಗುವಿನ ಅಜ್ಜ ಹೇಳಿದ್ದಾರೆ ಎಂದು ಹೇಳಿದರು.

Leave a Reply