photo courtesy:kasargodvartha.com

ತೃಕ್ಕರಿಪುರ: ಮಗುವನ್ನು ಹೆತ್ತ ಯುವತಿ ಮಗುವನ್ನು ತೊರೆದು ಹೋದ ಘಟನೆ ಕೇರಳದ ತೃಕ್ಕರಿಪುರ ಎಂಬಲ್ಲಿ ನಡೆದಿದೆ. ಮಗುವನ್ನು ಚೈಲ್ಡ್ ಲೈನ್ ಸಂರಕ್ಷಣಾ ಕೇಂದ್ರಕ್ಕೆ ದಾಖಲಿಸಿದ್ದು ಮಗುವನ್ನು ಕರೆದುಕೊಂಡು ಹೋಗದಿದ್ದರೆ ಯುವತಿಯ ವಿರುದ್ಧ ಕ್ರಮ ಜರಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ತೃಕ್ಕರಿಪುರದ ಯುವತಿ ಬುಧವಾರ ಬೆಳಗ್ಗೆ ತಂದೆ ತಾಯಿಯೊಂದಿಗೆ ಹೊಟ್ಟೆನೋವೆಂದು ತೃಕ್ಕರಿಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಗೈನಾಕಾಲಜಿಸ್ಟ್ ಇಲ್ಲದ್ದರಿಂದ ಕರ್ತವ್ಯದಲ್ಲಿದ್ದ ವೈದ್ಯರು ಆಂಬುಲೆನ್ಸ್ ನಲ್ಲಿ ಪಯ್ಯನ್ನೂರಿನ ಸರಕಾರಿ ತಾಲೂಕಾಸ್ಪತ್ರೆಗೆ ಕಳುಹಿಸಿದ್ದರು.

ಇಲ್ಲಿ ಯುವತಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ತನಗೆ ಗರ್ಭಿಣಿಯಾಗಿದ್ದು ಗೊತ್ತಿರಲಿಲ್ಲ. ನನಗೆ ಮಗು ಬೇಡ ಎಂದು ಯುವತಿ ಹೇಳಿದರು. ಇದು ಚೈಲ್ಡ್ ಲೈನ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ತಿಳಿದು ಬಂದಿದ್ದು ಸ್ಥಳಕ್ಕೆ ಆಗಮಿಸಿದ ಅವರು ಮಗುವನ್ನು ತಾತ್ಕಾಲಿಕವಾಗಿ ಚೈಲ್ಡ್ ಲೈನ್ ಪಟ್ಟುವಂ ಎಂಬಲ್ಲಿನ ದೀನ ಸೇವಾ ಸಭೆಗೆ ಒಪ್ಪಿಸಿದ್ದಾರೆ. ಯುವತಿಗೆ ಮೂರು ವರ್ಷದ ಇನ್ನೊಂದು ಮಗು ಇದೆ.

Leave a Reply