ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು  COVID-19 ಪ್ರಯುಕ್ತ ಅನಾಥರು ಮತ್ತು ಬೀದಿ ಮಕ್ಕಳನ್ನು ಪರೀಕ್ಷಿಸಲು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಿತು. ಈ ಅಭಿಯಾನವು ಬೇರ್ಪಟ್ಟ ಮಗ ಮತ್ತು ತಾಯಿಯನ್ನು ಮತ್ತೆ ಒಂದಾಗುವಂತೆ ಮಾಡಿದೆ. ನಾಲ್ಕು ವರ್ಷಗಳಿಂದ ತಾಯಿ ಮತ್ತು ಮಗ ಬೇರ್ಪಟ್ಟಿದ್ದರು. ಈ ಅಭಿಯಾನದ ಫಲವಾಗಿ ಬಿಹಾರದ 10 ಮಕ್ಕಳನ್ನು ಕೂಡ ಅಧಿಕಾರಿಗಳು ಕಂಡುಕೊಂಡರು. ಅವರು ಬಂಧಿತ ಕಾರ್ಮಿಕರಾಗಿ ದುಡಿಯುತ್ತಿದ್ದರು. ಆಂಧ್ರಪ್ರದೇಶ ಪೊಲೀಸರು ‘ಆಪರೇಷನ್ ಮಸ್ಕನ್ ಕೋವಿಡ್ -19’ ಪ್ರಾರಂಭಿಸಿದ ಎರಡು ದಿನಗಳ ನಂತರ ಈ ಸ್ವಾರಸ್ಯಕರ ಘಟನೆ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೋಲು ನಿವಾಸಿ ಬಾಬ್ಬಾ ಶ್ರೀ ಲಲಿತಾ ಅವರ ಎರಡನೇ ಮಗ ಶ್ರೀನಿವಾಸ್ ಹುಟ್ಟಿದ ನಂತರ ಅವರು ತನ್ನ ಗಂಡನನ್ನು ಕಳೆದುಕೊಂಡರು. ತನ್ನ ಮಕ್ಕಳಿಗೆ ಆಹಾರಕ್ಕಾಗಿ, ಈ ತಾಯಿ ಕಸವನ್ನು ಹೆಕ್ಕುವ ಕೆಲಸ ಮಾಡಬೇಕಾಗಿತ್ತು.

ಐಎಎನ್‌ಎಸ್ ಪ್ರಕಾರ, ಶ್ರೀನಿವಾಸ್ 2016 ರಲ್ಲಿ ಮನೆಯಿಂದ ಓಡಿಹೋಗಿ ವಿಜಯವಾಡ ರೈಲು ನಿಲ್ದಾಣವನ್ನು ತಲುಪಿದ. ರೈಲ್ವೆ ಪೊಲೀಸರು ಅವರನ್ನು ಅಲ್ಲಿಂದ ರಕ್ಷಿಸಿ ವಿಜಯವಾಡದಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ವರ್ಗಾಯಿಸಿದರು, ಅಂದಿನಿಂದ ಆತ ಅಲ್ಲೇ ಇದ್ದ. ಆಪರೇಷನ್ ಮುಸ್ಕನ್ ಸಂದರ್ಭದಲ್ಲಿ, ಶ್ರೀನಿವಾಸ್ ತಾನು ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೋಲು ನಿವಾಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ನಂತರ ಅಧಿಕಾರಿಗಳು ಅವನನ್ನು ತಾಯಿಯ ಬಳಿ ಕರೆದೊಯ್ದರು.

“ಸುಮಾರು ನಾಲ್ಕು ವರ್ಷಗಳ ನಂತರ, ತಾಯಿ-ಮಗನ ಭೇಟಿಯು ಹೃದಯವನ್ನು ಸ್ಪರ್ಶಿಸುತ್ತಿತ್ತು. ಈ ರೀತಿಯ ವಿಷಯಗಳು ನಮಗೆ ಅಪಾರ ತೃಪ್ತಿಯನ್ನು ನೀಡುತ್ತದೆ ಮತ್ತು ನಮ್ಮನ್ನು ಮುಂದೆ ಸಾಗಿಸುತ್ತವೆ. ಇಂತಹ ಪ್ರತಿಯೊಂದು ಮಗುವನ್ನು ಕಾಪಾಡಲಾಗಿದೆ” ಡಿಜಿಪಿ ಗೌತಮ್ ಸಾವಂಗ್ ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯು ಪ್ರಾರಂಭವಾದ 72 ಗಂಟೆಗಳಲ್ಲಿ 2,546 ಮಕ್ಕಳನ್ನು ರಕ್ಷಿಸಿದ್ದಾರೆ. ಈ ಅಭಿಯಾನವು ಜುಲೈ 20 ರವರೆಗೆ ಮುಂದುವರಿಯುತ್ತದೆ.

Leave a Reply