ಬಕಾಕ: ಥೈಲೆಂಡಿನ ಲ್ಲಿ ಮಾನವೀಯತೆಯಿರುವೆಲ್ಲರೂ ತಲೆತಗ್ಗಿಸುವಂತಹ ನವಜಾತ ಶಿಶುವಿನ ತಾಯಿಯೊಬ್ಬಳು ದುಷ್ಟತನ ತೋರಿಸಿದ್ದಾರೆ. ನವಜಾತ ಶಿಶುವನ್ನು 5ನೆ ಮಹಡಿಯಿಂದ ಕೆಳಗೆಸೆದು ಯವತಿ ತಪ್ಪಿಸಿಕೊಂಡಿದ್ದಾಳೆ. ಮಗು ಅದೃಷ್ಟವಶಾತ್ ಬದುಕಿ ಉಳಿದಿದೆ.

ಆರೋಪಿ ಯುವತಿ ಅಪ್ರಾಪ್ತ ವಯಸ್ಕೆಯಾಗಿದ್ದು ಆಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಸೋಮವಾರ ಥಾಯ್ಲೆಂಡನ ಬಕಾಕದ ಸಮುತ್ ಪ್ರಾಕನ್ ಎಂಬಲ್ಲಿನ ಒಂದು ಅಪಾರ್ಟ್‍ಮೆಂಟಿನಲ್ಲಿ ಘಟನೆ ನಡೆದಿದ್ದು ಮಗುವನ್ನು ಐದನೆ ಮಹಡಿಯಿಂದ ಅದರ ತಾಯಿ ಕೆಳಗೆ ಎಸೆದಿದ್ದಳು.

ಸ್ಥಳೀಯ ಜನರು ಮಗು ಅಳುವ ಸದ್ದು ಕೇಳಿ ಬಂದಲ್ಲಿಗೆ ಹೋಗಿ ನೋಡಿದಾಗ ಮಗು ಸುರಕ್ಷಿತವಾಗಿರುವುದು ಕಂಡು ಬಂತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಐದನೆ ಮಹಡಿಯಿಂದ ಎಸೆಯಲ್ಪಟ್ಟಿದ್ದ ಮಗು ಬಾಳೆಗಿಡದ ಮೇಲೆ ಬಿದ್ದುದರಿಂದ ಜೀವ ಉಳಿದಿದೆ. ಬಾಲೆಗಿಡ ಮಗುವನ್ನು ಆಧರಿಸಿ ಭೂಮಿಗೆ ಮೆಲ್ಲನೆ ಬೀಳುವಂತೆ ಮಾಡಿತ್ತು. ಆದ್ದರಿಂದ ಮಗುವಿಗೆ ಕೇವಲ ತರಚು ಗಾಯಗಳು ಹಾಗೂ ಸೊಳ್ಳೆಗಳ ಕಡಿತ ಮಾತ್ರ ಆಗಿದೆ ಎಂದು ಸ್ಥಳೀಯ ಮಹಿಳೆ ಕೋಹನ್ ಎಂಬವರು ತಿಳಿಸಿದರು.

ಪೊಲೀಸರು ಆರೋಪಿ ಯುವತಿಯನ್ನು ಹುಡುಕುತ್ತಿದ್ದು ಆಕೆಯ ವಿರುದ್ಧ ಹತ್ಯೆ ಆರೋಪ ಹೊರಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮಗುವಿನ ತಾಯಿ ಅಪ್ರಾಪ್ತ ವಯಸ್ಸಿನ ಬಾಲಕಿಯೆಂದು ಪೊಲೀಸರಿಗೆ ತಿಳಿದು ಬಂದಿದೆ. ನೆರೆಹೊರೆಯವರಲ್ಲಿ ವಿಚಾರಿಸಿ ಮಗುವಿನ ತಾಯಿಯ ಪತ್ತೆಗಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ.

Leave a Reply